ನಿಗಮ ಮಂಡಳಿ ನೇಮಕಕ್ಕೆ ಸುರ್ಜೆವಾಲ ಮಾನದಂಡ; ಡಿಕೆಶಿ ಸ್ಪಷ್ಟೋಕ್ತಿ

dsk and surjewala
Published on

ಬೆಂಗಳೂರು: ನಿಗಮ ಮಂಡಳಿ ನೇಮಕಕ್ಕೆ ಕಾಂಗ್ರೆಸ್ ಪ್ರಕ್ರಿಯೆ ಆರಂಭಿಸಿದ್ದು, ಇದೇ ವೇಳೆ ಯಾರಿಗೆ ಅವಕಾಶ ಸಿಗಬಹುದು ಎಂಬುದನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ತಿಳಿಸಿದ್ದಾರೆ.

ನಿಗಮ ಮಂಡಳಿ ಸೇರಿದಂತೆ ಇತರೇ ಅಧ್ಯಕ್ಷ, ಸದಸ್ಯ ಸ್ಥಾನಗಳಿಗೆ ಯಾರ್ಯಾರನ್ನೋ ನೇಮಕ ಮಾಡುವುದಿಲ್ಲ, ಯಾವ ನಾಯಕರು ಪಕ್ಷಕ್ಕಾಗಿ ದುಡಿದಿದ್ದಾರೋ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಕೆಲವು ಸೂಚನೆ ನೀಡಿದ್ದಾರೆ. ಬೂತ್ ಮಟ್ಟದಲ್ಲಿ ಎಷ್ಟು ಮತಗಳನ್ನು ಪಕ್ಷಕ್ಕೆ ತಂದಿದ್ದಾರೋ ಅಂತಹ ನಾಯಕರಿಗೆ ಮೊದಲು ಪ್ರಾಶಸ್ತ್ಯ ನೀಡಿ ಎಂದಿದ್ದಾರೆ. ಅದರಂತೆ ನಡೆಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಹೊಸ ಸರ್ಕಾರ ರಚನೆಯಾದ ಬಳಿಕ ನಿಗಮ ಮಂಡಳಿಗೆ ಹೊಸದಾಗಿ ನೇಮಕ ಪ್ರಕ್ರಿಯೆ ನಡೆಯಲಿದೆ. ಆಡಳಿತ ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರಿಗೆ ಈ ಅವಕಾಶ ಸಿಗಲಿದೆ. ಅಂದಾಜು 75 ನಿಗಮಗಳಿಗೆ ಶೀಘ್ರವೇ ನೇಮಕ ನಡೆಯಲಿದ್ದು, ಶೇ.30ರಷ್ಟು ನಿಗಮಗಳನ್ನು ಪಕ್ಷದ ಶಾಸಕರಿಗೆ ಮೀಸಲಿಡಲು ಹಾಗೂ ಶೇ.70ರಷ್ಟನ್ನು ಕಾರ್ಯಕರ್ತರು- ಮುಖಂಡರಿಗೆ ನೀಡಲು ಪಕ್ಷ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net