ರಾಜಮಂಡ್ರಿಯಲ್ಲಿ 'ಕಂಗುವ' ಹವಾ; ಸೂರ್ಯ ನಟನೆಯ ಚಿತ್ರಕ್ಕೆ ಫ್ಯಾನ್ಸ್​ ಕಾತರ

Untitled design - 2023-08-16T183802.000
Published on

ಆಂಧ್ರಪ್ರದೇಶ: ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಅವರ ನಟಿಸುತ್ತಿರುವ ಬಹುನಿರೀಕ್ಷಿತ 'ಕಂಗುವ' ಚಿತ್ರದ ಹೊಸ ಅಪ್ಡೇಟ್​ಗೆ ಇದೀಗ ಫ್ಯಾನ್ಸ್ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಚಿತ್ರದ ಮುಖ್ಯಭಾಗದ ಚಿತ್ರೀಕರಣ ಇಂದಿನಿಂದ ಪ್ರಾರಂಭಗೊಂಡಿದೆ.

ತಮಿಳು ಭಾಷೆಯಲ್ಲಿ ತಯಾರಾಗುತ್ತಿರುವ 'ಕಂಗುವ' 2024ರ ಜನವರಿ ಅಥವಾ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಭಾರೀ ನಿರೀಕ್ಷೆ ವ್ಯಕ್ತವಾದ ಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ಸೂರ್ಯ ಅವರ ವೃತ್ತಿಜೀವನದಲ್ಲಿ ಈ ಚಿತ್ರ ಅತ್ಯಂತ ಬಿಗ್​ ಬಜೆಟ್​ ಸಿನಿಮಾ ಎಂದು ಹೇಳಲಾಗಿದೆ. ಆಕ್ಷನ್-ಡ್ರಾಮಾ ಜಾನರ್​ನಲ್ಲಿ ಮೂಡಿಬರಲಿರುವ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರೇಕ್ಷಕರು ಮತ್ತು ಸೂರ್ಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

'ಕಂಗುವ' ಚಿತ್ರೀಕರಣದ ಹೊಸ ವೇಳಾಪಟ್ಟಿ ಇದೀಗ ಘೋಷಣೆಯಾಗಿದ್ದು, ಇಂದು (ಆಗಸ್ಟ್​ 16) ಬೆಳಗ್ಗೆ ರಾಜಮಂಡ್ರಿಯಲ್ಲಿ ಪ್ರಾರಂಭವಾಗಿದೆ. 3 ವಾರಗಳ ಕಾಲ ಶೂಟಿಂಗ್​ ನಡೆಯುವ ಈ ಶೆಡ್ಯೂಲ್​ನಲ್ಲಿ ಹಲವಾರು ನಿರ್ಣಾಯಕ ಆ್ಯಕ್ಷನ್ ಸೀಕ್ವೆನ್ಸ್ ಮತ್ತು ಟಾಕಿ ಭಾಗಗಳನ್ನು ಚಿತ್ರೀಕರಿಸಲಾಗುತ್ತದೆ. ನಟ ಜಗಪತಿ ಬಾಬು ಕೂಡ ಈ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ರಾಜಮಂಡ್ರಿಯಲ್ಲಿ ಮುಗಿದ ನಂತರ ಚಿತ್ರ ತಯಾರಕರು ಮತ್ತೊಂದು ಭಾಗದ ಶೂಟಿಂಗ್​ಗಾಗಿ ಹೈದರಾಬಾದ್‌ಗೆ ತೆರಳಲಿದ್ದಾರೆ.

ಶಿವ ಅವರ ನಿರ್ದೇಶನದ ಕಂಗುವ ಚಿತ್ರದಲ್ಲಿ ಬಾಲಿವುಡ್​ನ ಹಾಟ್​ ನಟಿ ದಿಶಾ ಪಟಾನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬೇಬಿ ಡಿಯೋಲ್, ಕೋವೈ ಸರಳ, ಯೋಗಿ ಬಾಬು, ರೆಡ್ಡಿನ್​ ಕಿಂಗ್​​ಸ್ಲೇ, ಆನಂದ ರಾಜ ಸೇರಿದಂತೆ ಮುಂತಾದವರ ತಾರಾಗಣವಿದೆ ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್​ನಡಿ ಚಿತ್ರ ತಯರಾಗಿದ್ದು, ದೇವಿ ಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net