'ಕಂಗುವ' ಶೂಟಿಂಗ್​ ಸೆಟ್​ನಲ್ಲಿ ಅವಘಡ!; ಪ್ರಾಣಪಾಯದಿಂದ ಪಾರಾದ ನಟ ಸೂರ್ಯ

Untitled design (21)
Published on

ಚೆನ್ನೈ, ತಮಿಳುನಾಡು: ತಮಿಳು ಚಿತ್ರರಂಗದ ಸ್ಟಾರ್​ ನಟ ಸೂರ್ಯ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ 'ಕಂಗುವ' ಚಿತ್ರೀಕರಣದ ಸೆಟ್​​ನಲ್ಲಿ ಅವಘಡವೊಂದು ಸಂಭವಿಸಿದ್ದು, ಬಿಲ್ಡ್-ಅಪ್ ಶಾಟ್ ವೇಳೆ ಕ್ಯಾಮರಾ ರೋಪ್​ ನಟನ ಮೇಲೆ ದಿಢೀರ್​ ಕುಸಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಸೂರ್ಯಗೆ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಸಿರುತೈ ಶಿವ ನಿರ್ದೇಶನದ 'ಕಂಗುವ' ಚಿತ್ರದ ಚಿತ್ರೀಕರಣವು ತಡರಾತ್ರಿ ಚೆನ್ನೈನಲ್ಲಿ ನಡೆಯುತ್ತಿತ್ತು. ಸೆಟ್‌ನಲ್ಲಿ ಸೂರ್ಯ ಅವರ ಬಿಲ್ಡ್-ಅಪ್ ಶಾಟ್ ಅನ್ನು ಸೆರೆಹಿಡಿಯುವಾಗ ಆಕಸ್ಮಿಕವಾಗಿ ಕ್ಯಾಮರಾ ರೋಪ್​​ವೊಂದು ಸೂರ್ಯ ಅವರ ಭುಜಕ್ಕೆ ಬಡಿದಿದೆ. ಅದೃಷ್ಟವಶಾತ್ ಗಂಭೀರ ಗಾಯಗಳಿಂದ ಬಚಾವ್​ ಆಗಿದ್ದು, ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಘಟನೆಯ ಬೆನ್ನಲ್ಲೇ ಚಿತ್ರತಂಡವು ಚಿತ್ರೀಕರಣವನ್ನು ಮುಂದೂಡಿದೆ.

ಘಟನೆಯ ಸುದ್ದಿ ಕೇಳಿದ ಸೂರ್ಯ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಆತಂಕ ವ್ಯಕ್ತಪಡಿಸಿದ್ದು, ತಮ್ಮ ನೆಚ್ಚಿನ ನಟನ ಚೇತರಿಕೆಗೆ ಹಾರೈಸಿದ್ದಾರೆ ಮತ್ತು ಸೆಟ್‌ನಲ್ಲಿ ಹೆಚ್ಚು ಕಾಳಜಿ ವಹಿಸುವಂತೆ ವಿನಂತಿಸಿದ್ದಾರೆ. ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಚಿತ್ರವು 2024ರಂದು ತೆರೆಗೆ ಬರಲು ಸಿದ್ಧವಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net