ಸುರೇಶ್ ರೈನಾ ಪುತ್ರಿ ಯೋಗಾಸನ ಪ್ರವೀಣೆ!

Suresh-Raina-web
Published on

ಬೆಂಗಳೂರು: ಬೆಂಗಳೂರು: ಭಾರತೀಯ ಕ್ರಿಕೆಟ್ ರಂಗದಲ್ಲಿ ಸುರೇಶ್ ರೈನಾ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಕಳೆದ ಒಂದೂವರೆ ದಶಕದಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶದ ರೈನಾ ಛಾಪು ಮೂಡಿಸುತ್ತಿದ್ದಾರೆ. ಇದೀಗ ಸುರೇಶ್ ರೈನಾ ಸುಪುತ್ರಿ ಗಾರ್ಷಿಯಾ ಯೋಗಾಭ್ಯಾಸದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. 4 ವರ್ಷದ ಗಾರ್ಷಿಯಾ ಮನೆಯಲ್ಲೇ ಮಾಡುತ್ತಿರುವ ವಿವಿಧ ಯೋಗಾಸನದ ಭಂಗಿಗಳ ಚಿತ್ರವನ್ನು ರೈನಾ ಪತ್ನಿ ಪ್ರಿಯಾಂಕಾ ಚೌಧರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಗಾರ್ಷಿಯಾ ಶುಕ್ರವಾರವಷ್ಟೇ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ.

ಬಾಬಾ ರಾಮ್‌ದೇವ್ ಸ್ಫೂರ್ತಿ..!

2015ರಲ್ಲಿ ಮದುವೆಯಾದ ಸುರೇಶ್ ರೈನಾ ಹಾಗೂ ಪ್ರಿಯಾಂಕಾ ಚೌಧರಿ ದಂಪತಿಗೆ 2016ರಲ್ಲಿ ಗಾರ್ಷಿಯಾ ಜನಿಸಿದಳು. ಸ್ವತಃ ರೈನಾ ಹೇಳಿಕೊಂಡಂತೆ ಯೋಗ ಗುರು ಬಾಬಾ ರಾಮ್‌ದೇವ್‌ರಿಂದ ಸ್ಫೂರ್ತಿ ಪಡೆದು ಗಾರ್ಷಿಯಾ ಪ್ರತಿದಿನ ಮನೆಯಲ್ಲೇ ಯೋಗಾಭ್ಯಾಸ ಮಾಡುತ್ತಿದ್ದಾಳಂತೆ. ಗಾರ್ಷಿಯಾ ತಂದೆಯಂತೆ ಫಿಟ್ನೆಸ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದಾಳೆ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ. ಮಗಳ ೆಟೋಗಳನ್ನು ಶೇರ್ ಮಾಡಿಕೊಂಡಿರುವ ರೈನಾ, ‘ನನ್ನ ಹೆಮ್ಮೆಯ ಮಗಳಿಗೆ ಯೋಗ ಎಂದರೆ ಬಲು ಇಷ್ಟ. ಬಾಬಾ ರಾಮ್‌ದೇವ್ ಅವರೇ ಅವಳಿಗೆ ಸ್ಫೂರ್ತಿ’ ಎಂದಿದ್ದಾರೆ. ರೈನಾ-ಪ್ರಿಯಾಂಕಾ ದಂಪತಿಗೆ ಇದೇ ಮಾರ್ಚ್‌ನಲ್ಲಿ ಗಂಡು ಮಗು ಜನಿಸಿದೆ.

ಸಿಎಸ್‌ಕೆ ಸ್ಟಾರ್ ಆಟಗಾರ ರೈನಾ

ಕೋವಿಡ್-19ರಿಂದಾಗಿ ಲಾಕ್‌ಡೌನ್‌ನಲ್ಲಿರುವ ಸುರೇಶ್ ರೈನಾ ಮನೆಯಲ್ಲೇ ಫಿಟ್ನೆಸ್ ಕಂಡುಕೊಳ್ಳಲು ವಿವಿಧ ಕಸರತ್ತಿನಲ್ಲಿ ತೊಡಗಿದ್ದಾರೆ. 2008ರಿಂದಲ್ಲೂ ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಸಿಂಗ್ (ಸಿಎಸ್‌ಕೆ) ಭಾಗವಾಗಿರುವ ರೈನಾ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜತೆಗೆ ಮೂರು ಬಾರಿ ಟ್ರೋಫಿ ಜಯಿಸಿದ್ದಾರೆ. ಇದುವರೆಗೂ 193 ಐಪಿಎಲ್ ಪಂದ್ಯಗಳನ್ನಾಡಿರುವ ರೈನಾ ಏಕೈಕ ಶತಕ, 38 ಅರ್ಧಶತಕ ಸೇರಿದಂತೆ 5368 ರನ್ ಪೇರಿಸಿದ್ದಾರೆ. ರೈನಾ ಪತ್ನಿ ಪ್ರಿಯಾಂಕಾ ತಮ್ಮದೇ ೌಂಡೇಷನ್‌ನ ಮೂಲಕ ಮಹಿಳೆಯರಿಗೆ ಮತ್ತು ಬಡವರಿಗೆ ನೆರವಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net