More

    ಮನೆಯಲ್ಲೇ ಪೋಲ್‌ವಾಲ್ಟ್! ಈಗ ಮಹಿಳೆಯರ ಸರದಿ

    ಪ್ಯಾರಿಸ್: ಲಾಕ್‌ಡೌನ್ ಸಮಯದಲ್ಲಿ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ರೀಡಾಪಟುಗಳೂ ಇದರಿಂದ ಹೊರತಾಗಿಲ್ಲ. ಆನ್‌ಲೈನ್ ಮೂಲಕ ಚೆಸ್, ಶೂಟಿಂಗ್ ಮುಂತಾದ ಕ್ರೀಡೆಗಳಲ್ಲಿ ಮನೆಯಿಂದಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಥ್ಲೆಟಿಕ್ಸ್‌ನಲ್ಲೂ ಇಂಥ ಪ್ರಯತ್ನಗಳು ನಡೆದಿದ್ದು, ಈಗಾಗಲೆ ಪುರುಷರ ಪೋಲ್‌ವಾಲ್ಟ್ ತಾರೆಯರು ಮನೆಯ ಗಾರ್ಡನ್‌ನಲ್ಲೇ ಪೋಲ್ ಹಾರುವ ಮೂಲಕ ವರ್ಚುವಲ್ ಟೂರ್ನಿಯನ್ನು ಯಶಸ್ವಿಗೊಳಿಸಿದ್ದಾರೆ. ಇದೀಗ ಮಹಿಳಾ ಪೋಲ್‌ವಾಲ್ಟ್ ತಾರೆಯರೂ ಮನೆಯಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.

    ಇದನ್ನೂ ಓದಿ: ಕನ್ನಡಿಗನಿಗೆ 10 ನಂಬರ್ ಜೆರ್ಸಿ ಬಿಟ್ಟುಕೊಟ್ಟಿದ್ದ ಸಚಿನ್!

    ಒಲಿಂಪಿಕ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಗ್ರೀಸ್‌ನ ಕ್ಯಾಟರಿನಾ ಸ್ಟೆಾನಿಡಿ, ಅಮೆರಿಕದ ಒಳಾಂಗಣ ಪೋಲ್‌ವಾಲ್ಟ್ ಚಾಂಪಿಯನ್ ಕ್ಯಾಥಿ ನಗೆಯೊಟ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಕೆನಡದ ಆಲಿಶಾ ನ್ಯೂಮನ್ ಶನಿವಾರ ನಡೆಯಲಿರುವ ವರ್ಚುವಲ್ ಕ್ರೀಡಾಕೂಟದ ವೇಳೆ ತಮ್ಮ ತಮ್ಮ ಮನೆಯಿಂದಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಪುರುಷರ ಕೂಟದಂತೆ ‘ಅಲ್ಟಿಮೇಟ್ ಗಾರ್ಡನ್ ಕ್ಲ್ಯಾಷ್’ಎಂದು ಹೆಸರಿಡಲಾಗಿದೆ.

    ಸ್ಟೆಾನಿಡಿ ಅವರು ಅಥೆನ್ಸ್, ನಗೆಯೊಟ್ ಅವರು ಜಿಯೋರ್ಜಿಯಾದ ಮ್ಯಾರಿಯೆಟ್ಟಾ ಮತ್ತು ನ್ಯೂಮನ್ ಅವರು ಬೋಲ್ಟನ್‌ನ ಮನೆಯ ಆವರಣದಲ್ಲಿ 4 ಮೀಟರ್ ಎತ್ತರದ ಪೋಲ್ ಹಾರಲಿದ್ದಾರೆ. 30 ನಿಮಿಷಗಳ ಅವಧಿಯಲ್ಲಿ ಯಾರು ಅತಿ ಹೆಚ್ಚು ಬಾರಿ ಕ್ಲಿಯರ್ ಮಾಡುತ್ತಾರೋ ಅವರೇ ವಿಜೇತರಾಗುತ್ತಾರೆ.

    ಇದನ್ನೂ ಓದಿ: ಐಪಿಎಲ್ ಯಾಕೆ ಸ್ಪೆಷಲ್? ಕೊಹ್ಲಿ ಕೊಡ್ತಾರೆ ಕಾರಣ

    ‘ಇಂಥ ಸವಾಲಿನ ಸಮಯದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದೇ ಹೆಚ್ಚು ಪ್ರಮುಖವಾದುದು. ನಾವೆಲ್ಲರೂ ಒಟ್ಟಾಗಿ ಒಂದೇ ಕಡೆ ಸೇರಿ ಮತ್ತೆ ಯಾವಾಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತೇವೆಯೋ ಗೊತ್ತಿಲ್ಲ. ಈ ಸ್ಪರ್ಧೆಯಿಂದ ನಮಗೆ ಪ್ರೇರಣೆ ಹೆಚ್ಚುತ್ತದೆ ಮತ್ತು ಇಂಥ ಸಮಯದಲ್ಲಿ ಹೇಗೆ ತರಬೇತಿ ಪಡೆಯಬಹುದು ಎಂಬ ಸ್ಪಷ್ಟತೆ ಮೂಡುತ್ತದೆ’ ಎಂದು 30 ವರ್ಷದ ಸ್ಟೆಾನಿಡಿ ಹೇಳಿದ್ದಾರೆ.

    ಪುರುಷರ ವಿಭಾಗದಲ್ಲಿ ಟೈ ಆಗಿತ್ತು ಸ್ಪರ್ಧೆ!

    ಮನೆಯಲ್ಲೇ ಪೋಲ್‌ವಾಲ್ಟ್! ಈಗ ಮಹಿಳೆಯರ ಸರದಿ
    ಈ ಮುನ್ನ ಪುರುಷರ ವಿಭಾಗದ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ ಸ್ವೀಡನ್‌ನ ಅರ್ಮಂಡ್ ಡುಪ್ಲಾಂಟಿಸ್, ಮತ್ತು ್ರಾನ್ಸ್‌ನ ರೆನೌಡ್ ಲಾವಿಲ್ಲೆನಿ ಮತ್ತು ಅಮೆರಿಕದ ಸ್ಯಾಮ್ ಕೆಂಡ್ರಿಕ್ಸ್ ನಡುವೆ ‘ಅಲ್ಟಿಮೇಟ್ ಗಾರ್ಡನ್ ಕ್ಲ್ಯಾಷ್’ ನಡೆದಿತ್ತು. 30 ನಿಮಿಷಗಳಲ್ಲಿ ಇವರು 5 ಮೀಟರ್ ಎತ್ತರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಾರಬೇಕಾಗಿತ್ತು. ಮೂವರು ಒಟ್ಟಾರೆ 98 ಬಾರಿ ಕ್ಲಿಯರ್ ಮಾಡಿದ್ದರು. ಈ ಪೈಕಿ ಡುಪ್ಲಾಂಟಿಸ್ ಮತ್ತು ಲಾವಿಲ್ಲೆನಿ ತಲಾ 36 ಬಾರಿ ಹಾರಿ ಟೈ ಸಾಧಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts