More

    ಕ್ರೀಡಾ ಸಾಧಕರಿಗೆ ಅಭಿನಂದನೆ

    ಬಾಳೆಹೊನ್ನೂರು:ವ್ಯಾಪಾರ ನಡೆಸುತ್ತಿರುವವರು ವ್ಯವಹಾರದ ದುಡಿಮೆಯ ಸ್ವಲ್ಪ ಭಾಗವನ್ನು ಕ್ರೀಡಾ ಸಾಧಕರಿಗೆ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಕ್ರೀಡಾಪಟು ಓ.ಡಿ.ಸ್ಟೀನ್ ಹೇಳಿದರು.
    ಬಸ್‌ನಿಲ್ದಾಣದ ಎದುರಿನ ನ್ಯಾಷನಲ್ ಮಿನಿ ಮಾರ್ಟ್ ಸಂಸ್ಥೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಕ್ರೀಡಾ ಸಾಧಕರಿಗೆ ಅಭಿನಂದಿಸಿ ಮಾತನಾಡಿ, ವ್ಯಾಪಾರ ನಡೆಸುವವರು ಕೇವಲ ಲಾಭದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವ ಈ ಸಂದರ್ಭದಲ್ಲಿ ನ್ಯಾಷನಲ್ ಸಂಸ್ಥೆ ತಮ್ಮ ವ್ಯವಹಾರದೊಂದಿಗೆ ಕ್ರೀಡೆಯಲ್ಲಿ ಸಾಧನೆ ನಡೆಸಿದ ಕ್ರೀಡಾಪಟುಗಳನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯವಾಗಿದೆ.
    ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸತತ ಕ್ರೀಡೆಯಲ್ಲಿ ತೊಡಗಿಕೊಂಡರೆ ದೈಹಿಕ, ಮಾನಸಿಕ ಸ್ಥಿರತೆಗೆ ಪೂರಕವಾಗಲಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸಿ ಪ್ರೋತ್ಸಾಹಿಸಿದರೆ ಅವರು ಇನ್ನೂ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು. ಅಥ್ಲೆಟಿಕ್ಸ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಾಲೀಮ್, ರಮಿತಾ ಪೂಜಾರಿ, ರಾಜೇಶ್ವರಿ ಅವರನ್ನು ಅಭಿನಂದಿಸಲಾಯಿತು.
    ನ್ಯಾಶನಲ್ ಮಿನಿಮಾರ್ಟ್ ಸಂಸ್ಥೆ ಸಿಬ್ಬಂದಿ ರಫೀಕ್, ಅಬೂಬಕರ್, ಸುಲೇಮಾನ್, ಪತ್ರಕರ್ತ ಬಿ.ಎಸ್.ನಾಗರಾಜ್ ಭಟ್, ಸೈಯ್ಯದ್ ಾಜಿಲ್ ಹುಸೇನ್, ಶ್ಯಾಮ ಪೂಜಾರಿ, ಸಣ್ಣಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts