ಸೂರತ್‌ನ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ: ಸ್ಥಳದಲ್ಲಿ ನಲವತ್ತು ಅಗ್ನಿಶಾಮಕ ದಳದ ವಾಹನಗಳು, ಎರಡು ಮಹಡಿಯಲ್ಲಿ ಜ್ವಾಲೆ

SURAT
Published on

ಸೂರತ್​ (ಗುಜರಾತ್​): ಸೂರತ್‌ನ ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ 7.30ಕ್ಕೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ನಲವತ್ತು ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.

ರಘುವೀರ್ ಮಾರುಕಟ್ಟೆಯ ಕಟ್ಟಡಕ್ಕೆ ಬೆಂಕಿ ತಗುಲಿದೆ. ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ನಗರದ ಕೋಚಿಂಗ್ ಕೇಂದ್ರವೊಂದರಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ 20 ಜನರು, ಹೆಚ್ಚಾಗಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಕೆಲವೇ ತಿಂಗಳುಗಳ ನಂತರ ಇತ್ತೀಚಿನ ಮತ್ತೆ ಈ ಅವಘಡ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.

ಸೂರತ್‌ನ ಸಾರ್ಥಾನಾ ಪ್ರದೇಶದ ತಕ್ಷಶಿಲಾ ಆರ್ಕೇಡ್ ಎಂಬ ವಾಣಿಜ್ಯ ಕಟ್ಟಡದ ಮೊದಲ ಎರಡು ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಂದಾಜು ಕಟ್ಟಡದಲ್ಲಿ 60 ಜನರಿದ್ದರು. ಹೆಚ್ಚಿನ ವಿದ್ಯಾರ್ಥಿಗಳು 14 ರಿಂದ 17 ವರ್ಷದೊಳಗಿನವರು ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದರು.  (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net