ಸೂರಜ್ ರೇವಣ್ಣನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು

Suraj Revanna
Published on

ಬೆಂಗಳೂರು: ಶಾಸಕ ಎಚ್.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣ ಮತ್ತು ಸಂತ್ರಸ್ತನನ್ನು ಬುಧವಾರ ಬೌರಿಂಗ್ ಆಸ್ಪತ್ರೆೆಯಲ್ಲಿ ವೈದ್ಯಕೀಯ ಪರಿಕ್ಷೆಗೆ ಒಳಪಡಿಸಲಾಯಿತು.
ಸಿಐಡಿ ಕಚೇರಿಯಿಂದ ಪೊಲೀಸ್ ವಾಹನದಲ್ಲಿ ಸೂರಜ್ ರೇವಣ್ಣ ಅವರನ್ನು ಬೌರಿಂಗ್ ಆಸ್ಪತ್ರೆೆಗೆ ಕರೆತಂದ ಸಿಐಡಿ ಅಧಿಕಾರಿಗಳು, ವೈದ್ಯಕೀಯ ಪರೀಕ್ಷೆೆಗೆ ಒಳಪಡಿಸಿದರು. ಕೆಲ ಹೊತ್ತು ವೈದ್ಯಕೀಯ ಪರೀಕ್ಷೆೆ ನಡೆಸಿದ ಬಳಿಕ ಅವರನ್ನು ಮತ್ತೆೆ ಸಿಐಡಿ ಕಚೇರಿಗೆ ವಾಪಾಸ್ ಕರೆತರಲಾಯಿತು. ಇನ್ನು ಸೂರಜ್ ದೂರು ನೀಡಿದ ಮತ್ತೊರ್ವ ಸಂತ್ರಸ್ತನಿಗೂ ಸಹ ವೈದ್ಯಕೀಯ ಪರೀಕ್ಷೆೆ ನಡೆಸಲಾಗಿದೆ. ವೈದ್ಯಕೀಯ ಪರೀಕ್ಷಾಾ ವರದಿಯು ಕೆಲ ದಿನಗಳಲ್ಲೇ ಸಿಐಡಿ ಪೊಲೀಸರ ಕೈ ಸೇರಲಿದ್ದು, ಪ್ರಕರಣದ ಸಾಕ್ಷ್ಯದ ದೃಷ್ಟಿಯಿಂದ ಈ ವರದಿಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಸೂರಜ್ ವಿರುದ್ಧ ಹಾಸನದಲ್ಲಿ ದಾಖಲಾಗಿದ್ದ ಎರಡನೇ ಪ್ರಕರಣ ಸಹ ಸಿಐಡಿಗೆ ವರ್ಗಾವಣೆ ಆಗಿದೆ. ಮತ್ತೊಂದೆಡೆ ಸಿಐಡಿ ಅಧಿಕಾರಿಗಳು ಸೂರಜ್ ರೇವಣ್ಣರನ್ನು ವಿಚಾರಣೆಗೆ ಒಳಪಡಿಸಿ ಪ್ರಕರಣದ ಬಗ್ಗೆೆ ಕೂಲಂಕಷವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net