ಸಮಾಜಮುಖಿ ಕಾರ್ಯ ಚಟುವಟಿಕೆಗೆ ಪ್ರೇರಣೆ; ಸ್ವಾಮೀಜಿ

14-RNR-05
Published on

ರಾಣೆಬೆನ್ನೂರ: ಸಂಕಲ್ಪ ದೃಢವಾಗಿದ್ದರೆ ಮಾಡುವ ಕಾರ್ಯಗಳಿಗೆ ಫಲ ಸಿಗುತ್ತದೆ. ಮೊದಲು ಸಂಘಟಿತರಾದರೆ ಬಲ ಸಿಗುತ್ತದೆ. ಅದುವೇ ಸಮಾಜಮುಖಿ ಚಟುವಟಿಕೆಗೆ ಪ್ರೇರಣೆಯಾಗುತ್ತದೆ ಎಂದು ಕಡೆನಂದಿಹಳ್ಳಿಯ ಮಳೆ ಮಲ್ಲೇಶ್ವರ ತಪೋಕ್ಷೇತ್ರದ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೊರಬದ ಸುರಭಿ ಚಾರಿಟೇಬಲ್​ ಟ್ರಸ್ಟ್​ ಹಾಗೂ ಸ್ಥಳಿಯ ಸುರಭಿ ಸೇವಾ ಮಹಿಳಾ ಘಟಕದ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧರ್ಮಸಭೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದಲ್ಲಿ ನೆಮ್ಮದಿ ಜೀವನ ನಡೆಸಿ ಮಹಿಳೆಯರು ಸಬಲೀಕರಣವಾಗಲು ಶ್ರಮಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ದೇಶದ ಆಥಿರ್ಕ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ$್ಯದ ನಂತರದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ಕೌಶಲಗಳನ್ನು ಬಳಸಿಕೊಂಡು ಇಂದಿನ ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡರೆ ಇನ್ನಷ್ಟು ಯಶಸ್ಸು ಸಾಧಿಸಬಹುದು ಎಂದರು.

ಸೊರಬದ ಜಡೆ ಸಂಸ್ಥಾನಮಠ ಡಾ. ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಿಳಾ ಸಂದ ಅಧ್ಯಕ್ಷೆ ವಿನೂತಾ ರೇವಣಕರ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಎಸ್​.ಜಿ. ರಾಮಚಂದ್ರ, ರಾಜು ರೇವಣಕರ, ವಾಣಿಶ್ರೀ, ರಾಧಾ ವಿಠ್ಠಲಕರ, ಶೃತಿ ಕಿಚಡಿ, ಅನಿತಾ ರಾಯ್ಕರ, ವೀಣಾ ರೇವಣಕರ, ಪುಷ್ಪಾ ಭಟ, ಭಾರತಿ ವರ್ಣೇಕರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net