ಚಾಮರಾಜನಗರದ ಯಾತ್ರಾ ಸ್ಥಳಗಳಿಗೆ ಸುಪ್ರೀಂಕೋರ್ಟ್​ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ ದಂಪತಿ ಭೇಟಿ

justice jan 12 2020
Published on

ಚಾಮರಾಜನಗರ: ಸುಪ್ರೀಂಕೋರ್ಟ್​ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ ದಂಪತಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ದೇವರ ದರ್ಶನ ಪಡೆದರು.

ಪತ್ನಿ ಸಮೇತ ಜಿಲ್ಲೆಗೆ ಆಗಮಿಸಿದ ಅವರು ರಾಮಸಮುದ್ರದ ಹರಳುಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿದರು. ದೇವಾಲಯದ ಆಡಳಿತ ಮಂಡಳಿ ದಂಪತಿಗೆ ಪೂರ್ಣಕುಂಭ ಸ್ವಾಗತ ನೀಡಿತು. ನಂತರ ವಿಶೇಷ ಪೂಜೆ ನೆರವೇರಿಸಿದರು.

ಅಲ್ಲಿಂದ ಕೆ.ಗುಡಿ ಅರಣ್ಯ ವಿಶ್ರಾಂತಿ ಧಾಮಕ್ಕೆ ತೆರಳಿದರು. ವಿಶ್ರಾಂತಿ ಧಾಮದಲ್ಲಿ ಭಾನುವಾರ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಬೆಳಗ್ಗೆ ಬಿಳಿಗಿರಿ ರಂಗನಬೆಟ್ಟಕ್ಕೆ ಭೇಟಿ ಕೊಡಲಿದ್ದಾರೆ. ಸುತ್ತೂರು ಮಠಕ್ಕೆ ತೆರಳಿ ಶ್ರೀಗಳ ಆರ್ಶೀವಾದ ಪಡೆದು ಅಲ್ಲಿಂದ ಹಿಮವದ್​ ಗೋಪಾಲಸ್ವಾಮಿಬೆಟ್ಟ ಹಾಗೂ ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net