ರಾಮಸೇತು ಅರ್ಜಿ ತಿರಸ್ಕರಿಸಿದ ಸುಪ್ರೀಂ; ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಮಾಡಿದ್ದ ಮನವಿ

Rama Sethu
Published on

ನವದೆಹಲಿ: ರಾಮಸೇತುಗೆ ಗೋಡೆ ನಿರ್ಮಿಸಲು ಮತ್ತು ರಾಷ್ಟ್ರೀಯ ಸ್ಮಾರಕವೆಂದು ೂಷಿಸುವ ಕುರಿತು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್​ ಮಂಗಳವಾರ ನಿರಾಕರಿಸಿದೆ. ಇವು ಸರ್ಕಾರದ ಆಡಳಿತಾತ್ಮಕ ವಿಷಯ ಎಂದು ಹೇಳಿದೆ.

ರಾಮಸೇತು ಪ್ರದೇಶದಲ್ಲಿ ಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ಆದೇಶ ನೀಡುವಂತೆ ಕೋರಿ ಹಿಂದೂ ಪರ್ಸನಲ್​ ಲಾ ಬೋರ್ಡ್​ ಅಧ್ಯ ಅಶೋಕ್​ ಪಾಂಡೆ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಹಿಂದೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಸುಪ್ರೀಂಕೋರ್ಟ್​ನಲ್ಲಿ ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸಲು ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಸ್ವಾಮಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಾಕಿ ಇದೆ ಎಂದು ವಕೀಲರೂ ಆಗಿರುವ ಅಶೋಕ್​ ಪಾಂಡೆ ಪೀಠಕ್ಕೆ ತಿಳಿಸಿದರು. ಮಂಡಳಿ ಸಲ್ಲಿಸಿರುವ ಮನವಿಯನ್ನು ಸ್ವಾಮಿ ಅವರ ಬಾಕಿ ಇರುವ ಅರ್ಜಿಯೊಂದಿಗೆ ಸೇರಿಸುವಂತೆ ಪಾಂಡೆ ಪೀಠವನ್ನು ಒತ್ತಾಯಿಸಿದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್​ ಕಿಶನ್​ ಕೌಲ್​ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಗೋಡೆ ಕಟ್ಟಲು ಕೋರ್ಟ್​ ಆದೇಶ ನೀಡುವುದು ಹೇಗೆ. ಇದು ಆಡಳಿತಾತ್ಮಕ ವಿಷಯ, ಇದನ್ನು ನಾವೇಕೆ ನೋಡಬೇಕು ಎಂದು ಹೇಳಿದೆ. ಸಮಿತಿ ಅರ್ಜಿಯನ್ನು ಸ್ವಾಮಿ ಅವರ ಬಾಕಿ ಇರುವ ಅರ್ಜಿಯೊಂದಿಗೆ ಸೇರಿಸಬೇಕೆಂಬ ಅರ್ಜಿದಾರರ ಮನವಿ ಸಮ್ಮತಿಸಲು ಪೀಠ ನಿರಾಕರಿಸಿತು.

ಅರ್ಜಿದಾರರು ಬಯಸಿದಂತೆ ನಿರ್ದೇಶನದ ಯಾವುದೇ ಸ್ವರೂಪವನ್ನು ನೀಡಲು ಭಾರತದ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ಒಲವು ಹೊಂದಿಲ್ಲ ಎಂದು ಪೀಠವು ಮನವಿಯನ್ನು ಪರಿಗಣಿಸಲು ನಿರಾಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net