More

    ಕೇಂದ್ರದಿಂದ AI ಪಠ್ಯಕ್ರಮ; ಬುಡಕಟ್ಟು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ ಹೆಚ್ಚಳ

    ನವದೆಹಲಿ: ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸಬಲರನ್ನಾಗಿಸಿ, ಶೈಕ್ಷಣಿಕ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯದ ಅಧೀನದಲ್ಲಿ ನ್ಯಾಷನಲ್​ ಎಜ್ಯುಕೇಷನ್​ ಸೊಸೈಟಿ ಚಾರ್​ ಟೆಬಲ್​ ಸ್ಟೂಡೆಂಟ್ಸ್​ “ಅಮೆಜಾನ್​ ಪ್ಯೂಚರ್​ ಇಂಜಿನಿಯರ್​ ಪ್ರೋಗ್ರಾಮ್​’ ಎನ್ನುವ ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ.

    2022ರಲ್ಲಿ ಈ ಯೋಜನೆಯ ಮೊದಲ ಹಂತ ಜಾರಿಗೊಂಡು, 2 ದಿನದ ಕಾರ್ಯಾಗಾರವನ್ನು ತಾಂತ್ರಿಕ ಸೌಲಭ್ಯ ಹೊಂದಿದ್ದ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಕಂಪ್ಯೂಟರ್​ನ ಮೂಲಭೂತ ಪಠ್ಯಗಳಾದ ಕೋಡಿಂಗ್​, ಲೂಪ್ಸ್​, ಸುರತ ವೇದಿಕೆಗಳಲ್ಲಿ ಬ್ಲಾಕ್​ ಪ್ರೋಗ್ರಾಮಿಂಗ್​ ಬಳಸುವ ಬಗೆಯನ್ನು ಕುರಿತು ಮಾಹಿತಿ ನೀಡಲಾಗಿತ್ತು.

    ಇದೀಗ ಯೋಜನೆಯ 2ನೇ ಹಂತವನ್ನು ಇತ್ತಿಚೇಗೆ ಬುಡಕಟ್ಟು ವ್ಯವಹಾರ ಕಾರ್ಯದರ್ಶಿ ಅನಿಲ್​ ಕುಮಾರ್​ ಜಾ ಉದ್ಘಾಟಿಸಿದ್ದು, 6 ರಾಜ್ಯಗಳ 54 ಏಕಲವ್ಯ ಮಾಡೆಲ್​ ರೆಸಿಡೆನ್ಸಿಯಲ್​ ಶಾಲೆ(ಇಎಂಆರ್​ಎಸ್​)ಗಳಲ್ಲಿ ಪ್ರಾಯೋಗಿಕವಾಗಿ ಅನ್ವಯವಾಗಲಿದೆ. ಯೋಜನೆಯ ಸಲತೆಯ ಆಧಾರದ ಮೇಲೆ ದೇಶಾದ್ಯಂತ ಇರುವ ಬುಡುಕಟ್ಟು ಶಾಲೆಗಳಿಗೆ ವಿಸ್ತರಿಸಲಾಗುವುದು. 2ನೇ ಹಂತದ ಭಾಗವಾಗಿ ಅಡ್ವಾಂಸ್ಡ್​ ಬ್ಲಾಕ್​ ಪ್ರೋಗ್ರಾಮಿಂಗ್​, ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ ವಿಷಯಗಳು ಪಠ್ಯಕ್ರಮದಲ್ಲಿ ಸೇರ್ಪಡೆಗೊಂಡಿವೆ.

    ಮುಂಬರುವ ಬುಡಕಟ್ಟು ಪೀಳಿಗೆಯು ತಾಂತ್ರಿಕ ಅವಕಾಶವನ್ನು ಬಳಸಿಕೊಳ್ಳಲು ಅಮೆಜಾನ್​ ಪ್ಯೂಚರ್​ ಇಂಜಿನಿಯರ್​ ಪ್ರೋಗ್ರಾಮ್​ ಸುಸಜ್ಜಿತ ವೇದಿಕೆಯಾಗಿದ್ದು, ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಹಕಾರಿಯಾಗಲಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವ ಅರ್ಜುನ್​ ಮುಂಡ ಅಭಿಪ್ರಾಯಪಟ್ಟಿದ್ದಾರೆ.

    ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಯೋಜನೆ ಜಾರಿಯಾಗಲಿದ್ದು, 8 ಹಾಗೂ 9ನೇ ತರಗತಿಗೆ ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ನ ಮೂಲಭೂತ ಅಂಶಗಳ ಪಠ್ಯ ಇರಲಿದ್ದು, 10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್​ಇ ಕೌಶಲಗಳೊಟ್ಟಿಗೆ ಆಟಿಫಿಷಿಯಲ್​ ಇಂಟೆಲಿಜೆನ್ಸ್​ ಪಾಠಗಳು ಇರಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts