ತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ ‘ರಾಮಾ ರಾಮಾ ರೇ’ ಸತ್ಯಪ್ರಕಾಶ್; ಅವರಿನ್ನು ನಟ-ನಿರ್ಮಾಪಕ-ವಿತರಕ-ನಿರ್ದೇಶಕ

ಬೆಂಗಳೂರು: ‘ರಾಮಾ ರಾಮಾ ರೇ’ ಚಿತ್ರ ಖ್ಯಾತಿಯ ನಿರ್ದೇಶಕ-ನಿರ್ಮಾಪಕ ಸತ್ಯಪ್ರಕಾಶ್​ ಇನ್ನು ತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ಅರ್ಥಾತ್, ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಅಭಿನಯ ಕೂಡ ಮಾಡಲಿದ್ದಾರೆ. ಈ ಮೂಲಕ ‘ಒಂದಲ್ಲಾ ಎರಡಲ್ಲಾ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅವರ ನಿಜಜೀವನದಲ್ಲೂ ಒಂದಲ್ಲ ಎರಡಲ್ಲ ಎಂಬುದು ಕೂಡ ನಿಜವಾಗಿದೆ. ಅಂದರೆ ಅವರಿನ್ನು ವಿತರಕ-ನಿರ್ಮಾಪಕ-ನಿರ್ದೇಶಕರಾಗಿ ಮಾತ್ರವಲ್ಲದೆ ನಟರಾಗಿಯೂ ಗುರುತಿಸಿಕೊಳ್ಳಲಿದ್ದಾರೆ. ನಿರ್ದೇಶಕರು ತಮ್ಮ ಚಿತ್ರದ ಕಥೆಯನ್ನು ತೆರೆ ಮೇಲೆ ತರುವಾಗ ತಾವೂ ಅಭಿನಯಿಸುತ್ತಿರುವುದರ ಪಟ್ಟಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ … Continue reading ತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ ‘ರಾಮಾ ರಾಮಾ ರೇ’ ಸತ್ಯಪ್ರಕಾಶ್; ಅವರಿನ್ನು ನಟ-ನಿರ್ಮಾಪಕ-ವಿತರಕ-ನಿರ್ದೇಶಕ