ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿಗೆ ಬೆಂಬಲ; ತೆಲುಗು ಹೆಮ್ಮೆಯ ಪ್ರಶ್ನೆಯೇ ಇಲ್ಲ; ಚಂದ್ರಬಾಬು ನಾಯ್ಡು|Chandrababu Naidu

Chandrababu naidu
Published on

Chandrababu Naidu: ಲೋಕಸಭಾ ಚುನಾವಣೆಗೂ ಮೊದಲೇ ಎನ್​ಡಿಎ ಜೊತೆ ಟಿಡಿಪಿ ಮೈತ್ರಿ ಮಾಡಿಕೊಂಡಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ರಾಜಕೀಯವಿಲ್ಲ. ಎನ್​ಡಿಎ ಅಭ್ಯರ್ಥಿಗೆ ನಮ್ಮ ಬೆಂಬಲ. ತೆಲುಗು ಹೆಮ್ಮೆಯ ಪ್ರಶ್ನೆಯೇ ಇಲ್ಲ ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಶನಿವಾರ (ಆಗಸ್ಟ್ 23) ಹೇಳಿದ್ದಾರೆ.

ವಿಜಯವಾಡದಲ್ಲಿ ಈ ಕುರಿತು ಮಾತನಾಡಿರುವ ಅವರು, ಎನ್​ಡಿಎ ಅಭ್ಯರ್ಥಿಗೆ ಸ್ಪಷ್ಟ ಬಹುಮತ ಇದೆ. ಗೆಲ್ಲುವ ಸಾಧ್ಯತೆಯೇ ಇಲ್ಲದೆ ಅಭ್ಯರ್ಥಿಯನ್ನು ಇಂಡಿಯಾ ಕೂಟದವರು ನಿಲ್ಲಿಸಿ ರಾಜಕೀಯ ಮಾಡುತ್ತಿದ್ದಾರೆ. ನಾವು ರಾಜಕೀಯ ಮಾಡಲ್ಲ. ಇಂಡಿಯಾ ಕೂಟದ ಅಭ್ಯರ್ಥಿಯನ್ನು ಬೆಂಬಲಿಸಲ್ಲ ಎಂದು ಒತ್ತಿ ಹೇಳಿದರು.

ಇದೇ ಅಖಂಡ ಆಂಧ್ರ ಪ್ರದೇಶದ ಮೂಲದ ಇಂಡಿಯಾ ಮೈತ್ರಿಕೂಟ ಅಭ್ಯರ್ಥಿ ನ್ಯಾ. ಸುದರ್ಶನ್ ರೆಡ್ಡಿ ಅವರನ್ನು ಎರಡು ತೆಲುಗು ರಾಜ್ಯಗಳು ಬೆಂಬಲಿಸಬೇಕು ಎಂಬ ಅಭಿಪ್ರಾಯವನ್ನು ತಿರಸ್ಕರಿಸಿದ ಅವರು, ಇದರಲ್ಲಿ ತೆಲುಗು ಹೆಮ್ಮೆ ಅಪ್ರಸ್ತುತ ಎಂದರು.

ಈ ವೇಳೆ ಟಿಡಿಪಿಯ ಐತಿಹಾಸಿಕ ನಿಲುವನ್ನು ನೆನಪಿಸಿಕೊಂಡ ಅವರು, ಪಿ.ವಿ,ನರಸಿಂಹರಾವ್ ಪ್ರಧಾನಿಯಾಗಿದ್ದಾಗ, ಕಾಂಗ್ರೆಸ್ ವಿರೋಧಿಯಾಗಿದ್ದರು ಅವರನ್ನು ಬೆಂಬಲಿಸಿತ್ತು. ಗೆಲುವಿನ ಸಾಧ್ಯತೆ ಇದ್ದು ತೆಲುಗು ಅಭ್ಯರ್ಥಿಯನ್ನು ನಿಲ್ಲಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ತಿಳಿಸಿದರು. ಎನ್​ಡಿಎ ಅಭ್ಯರ್ಥಿ ಸಿ.ಪಿ.ರಾಧಕೃಷ್ಣನ್ ಉತ್ತಮ, ಸಜ್ಜನ ವ್ಯಕ್ತಿಯಾಗಿದ್ದು, ಉಪರಾಷ್ಟ್ರಪತಿ ಸ್ಥಾನಕ್ಕೆ ಖ್ಯಾತಿ ತರುತ್ತಾರೆ ಎಂದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net