

ಕಳೆದ ವರ್ಷ ಬಜೆಟ್ ಗಾತ್ರದಲ್ಲಿ ಶೇ.12.7 ಮೊತ್ತವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಟ್ಟಿತ್ತು. ಈ ಬಾರಿ 2,65,720 ಕೋಟಿ ರೂ. ಗಾತ್ರದ ಬಜೆಟ್ನಲ್ಲಿ 31,980 ಕೋಟಿ ರೂ. ಅಂದರೆ ಶೇಕಡ 12 ಶಿಕ್ಷಣಕ್ಕೆ ಮೀಸಲಿರಿಸಿರುವುದು ಸ್ವಾಗತಾರ್ಹ.
ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕಾಗಿ ಕಂಡು ಬಂದ ಪ್ರಮುಖ ಅಂಶಗಳಾದ 500 ಕೋಟಿ ರೂ.ಗಳಲ್ಲಿ ಶಾಲೆಗಳ ಮೂಲಸೌಕರ್ಯಗಳ ಅಭಿವೃದ್ಧಿ, ಹಿಂದುಳಿದ ಜಿಲ್ಲೆಗಳಲ್ಲಿ 7 ವಿಶ್ವವಿದ್ಯಾಲಯಗಳ ಸ್ಥಾಪನೆ, ಬೆಂಗಳೂರಿನ 20 ಸಾವಿರ ಶಾಲೆಗಳನ್ನು ಬೆಂಗಳೂರು ಪಬ್ಲಿಕ್ ಶಾಲೆಗಳಾಗಿ ಮಾರ್ಪಾಡು, ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆಗಳ ಉನ್ನತೀಕರಣ, ಬಾಲಕಿಯರ 169 ಪ್ರೌಢ ಶಾಲೆಗಳಿಗೆ ಲ್ಯಾಬ್-ಇ-ಎ-ಕಿಟ್, 100 ಡಾ.ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಇವೆಲ್ಲ ಅಭಿವೃದ್ಧಿಗೆ ಪೂರಕ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ಒಲವು ತೋರುತ್ತಿದ್ದು, ಇದರ ತರಬೇತಿಗಾಗಿ ಆನ್ಲೈನ್ ವ್ಯವಸ್ಥೆ ಮಾಡಿರುವುದು ಪ್ರಸ್ತುತವಾಗಿದೆ. 215 ಸರ್ಕಾರಿ ಕಾಲೇಜುಗಳನ್ನು ನ್ಯಾಕ್ಗೆ ಒಳಪಡಿಸಲು ಕ್ರಮ ತೆಗೆದುಕೊಂಡಿರುವುದು ಪ್ರಶಂಸನೀಯ. ಐಐಟಿ, ಐಐಎಂನಂತೆಯೇ ಕೆಐಟಿ ಸ್ಥಾಪಿಸಲು ಮುಂದೆ ಬಂದಿರುವುದರಿಂದ ಏಳು ಸರ್ಕಾರಿ ಕಾಲೇಜುಗಳು ಅಭಿವೃದ್ಧಿ ಕಾಣಲು ಸಹಕಾರಿಯಾಗಲಿದೆ.
ವಿವಿಗಳ ಸ್ಥಾಪನೆಗೆ ಬರಪೀಡಿತ ಪ್ರದೇಶವನ್ನು ಸರ್ಕಾರ ಆಯ್ಕೆ ಮಾಡಿಕೊಂಡಿರುವುದು ಒಳ್ಳೆಯ ವಿಷಯ. ಆ ಮೂಲಕ ಆ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ. ಇಲ್ಲಿ ಸರ್ಕಾರಕ್ಕೆ ವಿತ್ತೀಯ ಕೊರತೆ ಬಂದಿದ್ದರೂ ಇದಕ್ಕೆ ಮುಖ್ಯ ಕಾರಣ ಜಾಗತಿಕ ಮಟ್ಟದಲ್ಲಿ ಕಂಡುಬಂದಿದ್ದ ಕೋವಿಡ್ ಕಾಲದ ಆರ್ಥಿಕ ಹಿಂಜರಿತ ಎನ್ನಬಹುದು. ಪ್ರಸ್ತುತ ಆರ್ಥಿಕ ಚಟುವಟಿಕೆಗಳು ಗರಿಗೆದರಿ
ಪುನಶ್ಚೇತನಗೊಂಡು ಮತ್ತೆ ಬಲಗೊಳ್ಳುತ್ತದೆ ಎಂಬ ಆಶಯ ಇದ್ದೇ ಇದೆ. ಬಜೆಟ್ನಲ್ಲಿ ರಾಜ್ಯದ ಪ್ರಗತಿಯ ಭವಿಷ್ಯ ಬರೆಯುವೆ ಎಂದು ನುಡಿದಿದ್ದ ಮುಖ್ಯಮಂತ್ರಿಗಳು ತಮ್ಮ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಆ ಮೂಲಕ ಓರ್ವ ದಕ್ಷ ಆಡಳಿತಜ್ಞರಾಗಿ ಮಾತ್ರವಲ್ಲದೆ ತಲರ್ಸ³ ಅನುಭವಿ ಆರ್ಥಿಕ ತಜ್ಞರಾಗಿಯೂ ಹೊರಹೊಮ್ಮಿದ್ದಾರೆ.