

ತಮಿಳುನಾಡು: ತಲೈವಾ ರಜನಿಕಾಂತ್ ಅಭಿನಯದ 'ಮುತ್ತು' ಸಿನಿಮಾ 1995 ರಲ್ಲಿ ಬಿಡುಗಡೆಗೊಂಡು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇದೀಗ ಈ ಚಿತ್ರವನ್ನು ಮತ್ತೊಮ್ಮೆ ತೆರೆಗೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಚಿತ್ರತಂಡ.
ಡಿಸೆಂಬರ್ 12 ರಂದು ರಜನಿ ಹುಟ್ಟುಹಬ್ಬದ ಹಿನ್ನಲೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಈ ಚಿತ್ರವನ್ನು ಚಿತ್ರ ತಯಾರಕರು ರೀ-ರಿಲೀಸ್ ಮಾಡುತ್ತಿದ್ದಾರೆ. ಸದ್ಯ ಈ ಸಂಗತಿ ಫ್ಯಾನ್ಸ್ಗಳಲ್ಲಿ ಭಾರೀ ಸಂತಸ ಮೂಡಿಸಿದೆ.
ರಜನಿಕಾಂತ್ ಮತ್ತು ರೋಜಾ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಮುತ್ತು' ಚಿತ್ರದ ತೆಲುಗು ಆವೃತ್ತಿಯ ಮರು ಬಿಡುಗಡೆ ದಿನಾಂಕವನ್ನು ಇದೀಗ ದೃಢಪಡಿಸಲಾಗಿದ್ದು, ಇದೇ ಡಿಸೆಂಬರ್ 2, 2023 ರಂದು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಇದರ ಬೆನ್ನಲ್ಲೇ ತಲೈವಾ ಅಭಿನಯದ ಮತ್ತೊಂದು ಸೂಪರ್ಹಿಟ್ ಸಿನಿಮಾ 'ಶಿವಾಜಿ: ದಿ ಬಾಸ್' ಕೂಡ ಡಿಸೆಂಬರ್ 9 ರಂದು ಮರು ಬಿಡುಗಡೆಯಾಗಲಿದೆ.
ಪಸ್ತುತ ರಜನಿಕಾಂತ್ ತಮ್ಮ ಮುಂದಿನ 'ತಲೈವರ್ 171' ಮತ್ತು 'ಲಾಲ್ ಸಲಾಂ' ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಸಮೀಪಿಸುತ್ತಿರುವ ಹಿನ್ನಲೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಜನ್ಮದಿನವನ್ನು ಭರ್ಜರಿಯಾಗಿ ಸಂಭ್ರಮಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್).