ಕಲೆ ಮತ್ತು ಕ್ರೀಡೆಗೆ ಬಾಂಧವ್ಯ ಬೆಸೆಯುವ ಶಕ್ತಿ ಇದೆ

24sunti03
Published on

ಸುಂಟಿಕೊಪ್ಪ: ಕಲೆ ಮತ್ತು ಕ್ರೀಡೆಗೆ ಜಾತಿ, ಸಮುದಾಯ ಮತ್ತು ರಾಜಕೀಯ ಪಕ್ಷಗಳನ್ನು ಮೀರಿದ ಬಾಂಧವ್ಯ ಬೆಸೆಯುವ ಶಕ್ತಿ ಇದೆ ಎಂದು ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

ನಾಕೂರು ಶಿರಂಗಾಲದ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಬೆಳ್ಳಿ ಹಬ್ಬದ ಅಂಗವಾಗಿ ಕಾನ್‌ಬೈಲ್ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕ್ರೀಡೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯುವಕರ ಸಂಘ 25 ವರ್ಷ ಸೇವೆ ಸಲ್ಲಿಸಿದೆ ಎಂದರೆ ಅದು ಸಾಧನೆ. 2 ತಲೆಮಾರುಗಳ ಸೇವೆ ಈ ಸಂಘಕ್ಕೆ ದೊರಕಿದೆ. ಕ್ರೀಡಾ ಚಟು ವಟಿಕೆಯಿಂದ ವಿವಿಧ ರಂಗದ ಜನರನ್ನು ಒಂದು ಮಾಡಿರುವುದು ಶ್ಲಾಘನೀಯ ಎಂದರು. ಈ ಸಂಸ್ಥೆ ಶತಮನೋತ್ಸವ ಆಚರಿಸಲಿ ಎಂದವರು ಆಶಿಸಿದರು. ಶ್ರೇಷ್ಠತೆಯ ವ್ಯಸನದಲ್ಲಿ ಅಂತರಿಕ ಸಂಘರ್ಷ ಹೆಚ್ಚಾಗುತ್ತಿದೆ. ಆದರೆ ನಾಕೂರಿನ ಯೂತ್‌ಕ್ಲಬ್ ಕ್ರೀಡಾಕೂಟಗಳ ಆಯೋಜನೆ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದೆ. ಎಲ್ಲರನ್ನೂ ಪ್ರೀತಿ ಮತ್ತು ವಿಶ್ವಾಸದಲ್ಲಿ ಒಟ್ಟುಮಾಡುವ ಕಾರ್ಯ ಮಾದರಿ ಎಂದರು.

ಗ್ರಾಮಸ್ಥರ ಕೊಡುಗೆ: ಅಧ್ಯಕ್ಷತೆ ವಹಿಸಿದ್ದ ನಾಕೂರು ಶಿರಂಗಾಲ ಗ್ರಾಪಂ ಅಧ್ಯಕ್ಷ ಮಂದೋಡಿ ಜಗನ್ನಾಥ ಮಾತನಾಡಿ

ಯೂತ್ ಕ್ಲಬ್ ಸಾಧನೆಗೆ ಗ್ರಾಮಸ್ಥರ ಕೊಡುಗೆಯೂ ಅಪಾರವಾಗಿದೆ ಎಂದರು. ಕ್ರೀಡೆಯಿಂದ ಉತ್ತಮ ಆರೋಗ್ಯ ಲಭ್ಯವಾಗಲಿದೆ. ಕ್ರೀಡೆ ನಮ್ಮನ್ನು ಜೀವನ ಪರ್ಯಾಂತ ದೈಹಿಕ ಮತ್ತು ಮಾನಸಿಕ ಉಲ್ಲಾಸವಂತರನ್ನಾಗಿಸುತ್ತದೆ ಎಂದರು.

ಉದ್ಯಮಿ ನಾಕೂರು ಮೂಲೆಮನೆ ಕೋಮಲ್ ಸಾಬ್ಲೆ , ಯೂತ್ ಕ್ಲಬ್ ಅಧ್ಯಕ್ಷ ಶಂಕರನಾರಾಯಣ,

ಮಾಜಿ ಅಧ್ಯಕ್ಷ ಪಿ.ಎಸ್.ಅಜಿತ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ತಾಲೂಕು ಬಿಜೆಪಿ ಅಧ್ಯಕ್ಷ ಗೌತಮ್, ಗ್ರಾಪಂ.ಉಪಾಧ್ಯಕ್ಷ ಬಿ.ಇ.ಸತೀಶ್, ಸದಸ್ಯರಾದ ಅರುಣಾ ಕುಮಾರಿ, ಪ್ರಕಾಶ್,ರಾಧಾಮಣಿ,ಸೀತೆ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಬಸಪ್ಪ, ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಹಾರಂಗಿ ಕಾವೇರಿ ಮಿನುಗಾರರ ಸಂಘದ ಅಧ್ಯಕ್ಷ ಮಹಮ್ಮದ್, ಕಾಫಿ ಬೆಳೆಗಾರರಾದ ಕೆ.ಎಂ.ನಂಜಪ್ಪ,ಅಡಿಕೇರಿ ಧರ್ಮಪ್ಪ, ಪಿ.ಎಂ.ಈರಪ್ಪ ಇತರರು ಇದ್ದರು.

ಕಾನ್‌ಬೈಲ್ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸ್ಥಳೀಯರಿಗೆ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರಾರು ಕ್ರೀಡಾಸಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net