ನಾನು ಇಮ್ರಾನ್​ ಹಶ್ಮಿ, ಸನ್ನಿ ಲಿಯೋನ್​ ಮಗನೆಂದ ಕಾಲೇಜು ವಿದ್ಯಾರ್ಥಿಗೆ ಸನ್ನಿ ಕೊಟ್ರು ಸೂಪರ್​ ಉತ್ತರ!

Sunny
Published on

ಮುಂಬೈ: ಅಡ್ಮಿಟ್​ ಕಾರ್ಡ್​ನಲ್ಲಿ ಪೊಷಕರ ಕಾಲಂನಲ್ಲಿ ತಂದೆಯಾಗಿ ನಟ ಇಮ್ರಾನ್​​ ಹಶ್ಮಿ ಮತ್ತು ತಾಯಿಯಾಗಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ ಹೆಸರು ಬರೆದಿರುವ ಬಿಹಾರದ ಕಾಲೇಜು ವಿದ್ಯಾರ್ಥಿಗೆ ಸನ್ನಿ ಲಿಯೋನ್​ ನೀಡಿದ ಉತ್ತರ ಭಾರಿ ವೈರಲ್​ ಆಗಿದೆ.

ಧನರಾಜ್​ ಮಹತೋ ಡಿಗ್ರಿ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿ ಕುಂದನ್​ ಕುಮಾರ್​ (20) ಅಡ್ಮಿಟ್​ ಕಾರ್ಡ್​​​ ವೈರಲ್ ಆದ ಬೆನ್ನಲ್ಲೇ ಟ್ವೀಟ್​ ಮೂಲಕ ಸನ್ನಿ ಲಿಯೋನ್​ ಪ್ರತಿಕ್ರಿಯಿಸಿದ್ದಾರೆ. ಈ ಮಗು ನಿಜಕ್ಕೂ ಅದ್ಭುತ... ಇದು ದೊಡ್ಡ ಕನಸು ಕಾಣುವ ದಾರಿ ಅಹ್ಹಹ್ಹಾ ಎಂದು ಅಡ್ಮಿಟ್​ ಕಾರ್ಡ್​ ಫೋಟೋವನ್ನು ಶೇರ್​ ಮಾಡಿ ವಿದ್ಯಾರ್ಥಿಯ ಬಗ್ಗೆಯೇ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಇದಕ್ಕೂ ಮುಂಚೆ ಇಮ್ರಾನ್​ ಸಹ ಪ್ರತಿಕ್ರಿಯೆ ನೀಡಿದ್ದರು. ಅವನು ನಿಜಕ್ಕೂ ನನ್ನ ಮಗನಲ್ಲ ಎಂದು ನಾನು ಆಣೆ ಮಾಡುತ್ತೇನೆಂದು ಹಾಸ್ಯ ಚಟಾಕಿ ಹಾರಿಸಿದ್ದರು.

ಅಡ್ಮಿಟ್​ ಕಾರ್ಡ್​ ವೈರಲ್​ ಆಗುತ್ತಿದ್ದಂತೆ ಅದನ್ನು ನೋಡಿದ ಮುಜಾಫರ್​ಪುರದಲ್ಲಿರುವ ಬಿಹಾರದ ಬಾಬಾ ಸಾಹೇಬ್​ ಭೀಮ್​ರಾವ್​ ಅಂಬೇಡ್ಕರ್ ವಿಶ್ವವಿದ್ಯಾಲಯ ದಿಗ್ಭ್ರಾಂತಗೊಂಡಿದೆ. ವಾಸ್ತವವಾಗಿ ಪರೀಕ್ಷಾರ್ಥಿ ಕುಂದನ್ ಕುಮಾರ್​ ಧನರಾಜ್​ ಮಹತೋ ಡಿಗ್ರಿ ಕಾಲೇಜಿನ ವಿದ್ಯಾರ್ಥಿ.

ಕುಂದನ್​ ಕುಚೇಷ್ಟೇಯಿಂದ ತಂದೆಯ ಹೆಸರನ್ನು ಇಮ್ರಾನ್​ ಹಶ್ಮಿ ಹಾಗೂ ತಾಯಿಯ ಹೆಸರನ್ನು ಸನ್ನಿ ಲಿಯೋನ್​ ಎಂದು ಹೇಳಿದ್ದಾನೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಇದಕ್ಕೂ ನಿಜಕ್ಕೂ ತುಂಟಾಟವಾಗಿದೆ. ಇದಕ್ಕೆ ವಿದ್ಯಾರ್ಥಿಯೇ ನೇರ ಹೊಣೆಯಾಗಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್​ ರಾಮ್​ ಕೃಷ್ಣ ಠಾಕೂಲ್​ ಹೇಳಿದ್ದಾರೆ.

ಇಮ್ರಾನ್​ ಮತ್ತು ಸನ್ನಿ ಮಿಲನ್​ ಲುಥರಿಯಾ ನಿರ್ದೇಶನದ ಬಾದ್ಷಾಹೋ ಚಿತ್ರದ ಪಿಯಾ ಮೋರ್​ ಹಾಡಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದನ್ನು ಬಿಟ್ಟರೆ, ಮತ್ತೆ ಅವರಿಬ್ಬರು ಯಾವ ಚಿತ್ರದಲ್ಲೂ ಒಂದಾಗಿಲ್ಲ. ಇದೀಗ ಅಡ್ಮಿಟ್​ ಕಾರ್ಡ್​ ಘಟನೆ ಮತ್ತೆ ಅವರಿಬ್ಬರನ್ನೂ ಒಂದೇ ಹಾಳೆಯಲ್ಲಿ ಒಟ್ಟಿಗೆ ಸೇರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net