

ಹೊಳೆನರಸೀಪುರ : ಸೂರ್ಯ ನಮಸ್ಕಾರ ಮಾಡುವುದರಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯ ಲಭ್ಯವಾಗುತ್ತದೆ ಎಂದು ಹಿರಿಯ ಯೋಗ ಗುರು ಕೆ.ಜಿ.ಗಣೇಶ್ ಬಾಬು ತಿಳಿಸಿದರು.
ಪಟ್ಟಣದ ಶ್ರೀ ಪತಂಜಲಿ ಯೋಗ ಕೇಂದ್ರದ ವತಿಯಿಂದ ರಥ ಸಪ್ತಮಿ ಅಂಗವಾಗಿ ಬುಧವಾರ ಆಯೋಜಿಸಲಾಗಿದ್ದ 108 ಸೂರ್ಯ ನಮಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
2004 ರಿಂದ ಪತಂಜಲಿ ಯೋಗ ಭವನದಲ್ಲಿ ಪ್ರತಿ ವರ್ಷವೂ ಮಾಘ ಶುಕ್ಲ ಸಪ್ತಮಿ ದಿನದಂದು 108 ಸೂರ್ಯ ನಮಸ್ಕಾರವನ್ನು ಆಯೋಜಿಸಲಾಗುತ್ತದೆ. ಜಗತ್ತಿನ ಸಕಲ ಜೀವ ರಾಶಿಗಳು ಬದುಕಲು ಸೂರ್ಯನೆಂಬ ಶಕ್ತಿ ಬೇಕು, ತೇಜೋಮಯನಾದ ಸೂರ್ಯ ಉಪಾಸನೆ ಮತ್ತು ಸೂರ್ಯ ನಮಸ್ಕಾರ ವ್ಯಾಯಾಮ ಮಾಡುವ ಮೂಲಕ ನಾವು ಆರೋಗ್ಯವಂತರಾಗುವುದರಲ್ಲಿ ಸಂಶಯವಿಲ್ಲ. ಕಾಮಾಲೆ ಕಾಯಿಲೆ ಮಕ್ಕಳಿಗೆ ಬಂದಾಗ ಸೂರ್ಯನ ಎಳೆ ಬಿಸಿಲು ಅತ್ಯಂತ ಪರಿಣಾಮಕಾರಿಯಾಗಿಗುಣಪಡಿಸುವ ಶಕ್ತಿ ಹೊಂದಿದೆ, ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಮಕ್ಕಳನ್ನು ಕಾಮಾಲೆ ಬಂದಾಗ ಇನ್ ಕ್ಯೂಬೇಟರ್ ನಲ್ಲಿ ಇಡಲಾಗುತ್ತದೆ, ಶಕ್ತಿಯ ಮೂಲ ಕೇಂದ್ರ ಸೂರ್ಯನಿಂದ ಉಚಿತವಾಗಿ ದೊರೆಯುವ ಬೆಳಕಿನ ಸದುಪಯೋಗವನ್ನು ಪಡೆದುಕೊಳ್ಳಬೇಕು. ಯೋಗದ ಮೂಲಕ ರೋಗ ಮುಕ್ತರಾಗಲು ಸೂರ್ಯ ನಮಸ್ಕಾರ ಸುವರ್ಣಾವಕಾಶವನ್ನು ಒದಗಿಸಲಿದೆ ಎಂದರು.
ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ನಮ್ಮ ಶ್ರೀ ಪತಂಜಲಿ ಯೋಗ ಭವನಕ್ಕೆ ಭೇಟಿ ನೀಡಿ ಯೋಗದ ಉಪಯೋಗವನ್ನು ಉಚಿತವಾಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಯೋಗ ಪಟು ಕರುಣಾಕರ, ಅಧ್ಯಕ್ಷ ಲೋಕೇಶ್ ಉಪಾಧ್ಯಕ್ಷರಾದ ಪ್ರೇಮಾ ಮಂಜುನಾಥ್ ವಾಸುದೇವ್ ಮೂರ್ತಿ, ಎಚ್.ಕೆ. ನರಸಿಂಹ, ಕರುಣಾಕರ ನಾರಾಯಣಪ್ಪ, ದೇವರಾಜಣ್ಣ, ಕೃಷ್ಣಮೂರ್ತಿ, ಮಂಜಣ್ಣ, ದಿನೇಶ್
ಚಂದ್ರಮತಿ, ಸುಜಾತಾ, ಪ್ರತಿಮಾ, ಧನಲಕ್ಷ್ಮೀ, ಸುರಕ್ಷಾ, ವಿಜಯಾ,ನೇತ್ರಾವತಿ, ಗುಣವತಿ, ರೂಪಾ, ಮಹೇಶ್ವರಿ, ಮಲ್ಲಿಕಾ,ಪ್ರಭಾ ಮಂಜುನಾಥ್ ಇನ್ನಿತರ ಯೋಗ ಪಟುಗಳು ಇದ್ದರು.