ನಟ ಸುನೀಲ್​ ಶೆಟ್ಟಿ ಅಪಾರ್ಟ್​ಮೆಂಟ್​ ಸೀಲ್!

sunilshetty
Published on

ಮುಂಬೈ : ಬಾಲಿವುಡ್​ ನಟ ಸುನೀಲ್​ ಶೆಟ್ಟಿ ವಾಸಿಸುವ ಮುಂಬೈನ ಅಪಾರ್ಟ್​ಮೆಂಟ್​ ಕಟ್ಟಡವನ್ನು ಬೃಹನ್​ಮುಂಬೈ ಮುನಿಸಿಪಲ್ ಕಾರ್ಪೋರೇಷನ್(ಬಿಎಂಸಿ) ಸೀಲ್ ಮಾಡಿದೆ. ಕಟ್ಟಡದ ಕೆಲವು ನಿವಾಸಿಗಳಲ್ಲಿ ಕೋವಿಡ್ 19 ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಪೃಥ್ವಿ ಅಪಾರ್ಟ್​ಮೆಂಟ್ಸ್​ ಕಟ್ಟಡವನ್ನು ಸೀಲ್ ಮಾಡಲಾಗಿದೆ. ಇಲ್ಲಿನ ನಿವಾಸಿಗಳಾಗಿರುವ ನಟ ಸುನಿಲ್ ಶೆಟ್ಟಿ ಅವರ ಇಡೀ ಕುಟುಂಬ ಸುರಕ್ಷಿತವಾಗಿದೆ ಎಂದು ಬಿಎಂಸಿ ಸಹಾಯಕ ಆಯುಕ್ತ ಪ್ರಶಾಂತ್ ಗಾಯಕ್​ವಾಡ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯಾವುದೇ ವಸತಿ ಸಮುಚ್ಛಯದಲ್ಲಿ ಐದಕ್ಕಿಂತ ಹೆಚ್ಚು ಕರೊನಾ ಕೇಸುಗಳು ವರದಿಯಾದಲ್ಲಿ ಅದನ್ನು ಸೀಲ್ ಮಾಡಿ, ಮೈಕ್ರೋಕಂಟೈನ್​ಮೆಂಟ್ ಜೋನ್​ ಆಗಿ ಘೋಷಿಸಲಾಗುತ್ತದೆ. ಬಿಎಂಸಿ ಪ್ರೋಟೋಕಾಲ್​ ಪ್ರಕಾರ ಸೊಸೈಟಿಯ ಗೇಟಿನ ಮೇಲೆ ಈ ಬಗ್ಗೆ ಫಲಕ ಹಾಕಿ, ಹೊರಗಿನವರಿಗೆ ಪ್ರವೇಶ ನಿರಾಕರಿಸಬೇಕಾಗಿರುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net