ಅಂಗನವಾಡಿಗಳಲ್ಲಿ ಪೂರಕ ಪೌಷ್ಠಕ ಆಹಾರ ಮತ್ತಷ್ಟು ಪೌಷ್ಠಿಕ!

01082021 Devadurga Anganawadi Center
Published on

ಬೆಂಗಳೂರು: ಪೂರಕ ಪೌಷ್ಠಿಕ ಆಹಾರ ಇನ್ನು ಮತ್ತಷ್ಟು ಪೌಷ್ಠಿಕಾಂಶ ಭರಿತವಾಗಲಿದೆ. ರಾಜ್ಯದ 69,899 ಅಂನವಾಡಿ ಕೇಂದ್ರಗಳ ಮೂಲಕ ಪೂರಕ ಪೌಷ್ಠಿಕ ಆಹಾರ ಸರಬರಾಜು ಮಾಡಲಾಗುತ್ತದೆ. ಈ ಅಂಗನವಾಡಿ ಮಕ್ಕಳಿಗೆ ಪಾಮೋಲಿನ್ ಬದಲು ಸೂರ್ಯಕಾಂತಿ ಎಣ್ಣೆ ಬಳಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಸೂರ್ಯಕಾಂತಿ ಎಣ್ಣೆ ಏಕೆ?

ರಾಜ್ಯದ ಪಾಮೋಲಿನ್ ಬಳಕೆ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಅಲ್ಲದೆ, ಸೂರ್ಯಕಾಂತಿ ಎಣ್ಣೆಯಲ್ಲಿ ಪಾಲಿ ಅನ್ ಸ್ಯಾಚುರೇಟೆಡ್ ್ಯಾಟಿ ಆಸಿಡ್‌ಗಳಾದ ಲಿನೋಲಿಕ್ ಆಸಿಡ್ ಮತ್ತು ಅಲ್ಪಾ ಲಿನೋಲಿಕ್ ಆಸಿಡ್‌ಗಳಿದ್ದು, ಇವು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆ ಅವಶ್ಯವಾಗಿವೆ. ಆದ್ದರಿಂದ ಪಾಮ್ ಆಯಿಲ್ ಬದಲಿಗೆ ಸೂರ್ಯಕಾಂತಿ ಎಣ್ಣೆ ಉಪಯೋಗಿಸಲು ತೀರ್ಮಾನಿಸಲಾಗಿದೆ.

9.90 ಕೋಟಿ ರೂ. ಹೆಚ್ಚುವರಿ ಹೊರೆ

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಮೂಲಕ ಪೂರಕ ಪೌಷ್ಟಿಕ ಆಹಾರ ವಿತರಿಸಲು ಪಾಮೋಲಿನ್ ಬದಲಾಗಿ ಸೂರ್ಯಕಾಂತಿ ಎಣ್ಣೆಯನ್ನು 66.04 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಮೂಲಕ ಖರೀದಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ, ಸರ್ಕಾರಕ್ಕೆ 9.9 ಕೋಟಿ ರೂ.ಹೆಚ್ಚುವರಿ ಹೊರೆಯಾಗಲಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಈ ವಿಷಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net