ಊಟಕ್ಕಾಗಿ ಕಷ್ಟಪಡುತ್ತಿದ್ದೀರಾ? ನಮ್ಮ ರೆಸ್ಟೋರೆಂಟ್‌ನಲ್ಲಿ ಉಚಿತವಾಗಿ ಪಡೆಯಿರಿ..ಸ್ಟಾರ್ ನಟ Sundeep Kishan ಕೊಟ್ಟರು ಬಿಗ್​ ಆಫರ್

sundeep
Published on

ಹೈದ್ರಾಬಾದ್​: ನಾಯಕ ಸಂದೀಪ್ ಕಿಶನ್  ( Sundeep Kishan ) ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ತಮ್ಮ ರೆಸ್ಟೋರೆಂಟ್​​ಗಳಿಂದ ಬಡವರಿಗೆ ಉಚಿತವಾಗಿ ಆಹಾರ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.  ಈ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.

ಸಂದೀಪ್ ಕಿಶನ್ ವಿವಾಹ ಭೋಜನ್ಮಬು (Vivaha Bhojanambu ) ಎಂಬ ರೆಸ್ಟೊರೆಂಟ್ ಅನ್ನು ಹೊಂದಿದ್ದಾರೆ. ಅವರು ಪ್ರತಿದಿನ ಪ್ರತಿ ಶಾಖೆಯ ರೆಸ್ಟೋರೆಂಟ್‌ನಿಂದ 50 ಜನರಿಗೆ ಉಚಿತವಾಗಿ ಆಹಾರವನ್ನು ಕಳುಹಿಸುತ್ತಾರೆ. ಸಂದೀಪ್ ಕಿಶನ್ ತನ್ನ ಏಳು ರೆಸ್ಟೋರೆಂಟ್‌ಗಳಿಂದ ಪ್ರತಿದಿನ ಸುಮಾರು 350 ಜನರಿಗೆ ಉಚಿತ ಊಟವನ್ನು ಬಡವರು ಮತ್ತು ಆಶ್ರಮಗಳಿಗೆ ನೀಡುತ್ತಿದ್ದಾರೆ.

ಇತ್ತೀಚೆಗಷ್ಟೇ ಸಂದೀಪ್ ಕಿಶನ್ ಈ ಕುರಿತು ಮಾಡಿರುವ ಟ್ವೀಟ್ ವೈರಲ್ ಆಗಿದೆ. ಸಂದೀಪ್ ಕಿಶನ್ ಅವರ Vivaha Bhojanambu ತಂಡವು ಬಡವರಿಗೆ ಅನ್ನ ವಿತರಿಸುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. Vivaha Bhojanambu ಊಟದಿಂದ ಮಾಡಿದ ಒಳ್ಳೆಯ ಕೆಲಸ ನನಗೆ ಹೆಮ್ಮೆ ತಂದಿದೆ.

ಯಾರಾದರೂ ಆಹಾರಕ್ಕಾಗಿ ಪರದಾಡುತ್ತಿದ್ದರೆ ಹತ್ತಿರದ ನಮ್ಮ ರೆಸ್ಟೋರೆಂಟ್‌ಗೆ ಹೋಗಿ ಉಚಿತವಾಗಿ ಆಹಾರ ಪ್ಯಾಕೆಟ್ ಪಡೆಯಿರಿ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮತ್ತು ನೆಟ್ಟಿಗರು ಸಂದೀಪ್ ಅವರನ್ನು ಅಭಿನಂದಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net