ರೈತರ ಸಂಘಟನೆಯೇ ಸುಂದರೇಶ್ ಗುರಿಯಾಗಿತ್ತು

sundaresh
ವೀರೇಶ್ವರ ಪುಣ್ಯಾಶ್ರಮದಲ್ಲಿ ಏರ್ಪಡಿಸಿದ್ದ ಎನ್.ಡಿ.ಸುಂದರೇಶ್ ಜನ್ಮದಿನಾಚರಣೆಯಲ್ಲಿ ಸಂಗಮೇಶ್ವರ ಗವಾಯಿ, ಶೋಭಾ ಸುಂದರೇಶ್, ಹುಮಾಯೂನ್ ಹರ್ಲಾಪುರ್, ಎನ್.ಎಸ್.ಸುಧಾಂಶು ಮುಂತಾದವರಿದ್ದರು.
Published on

ಶಿವಮೊಗ್ಗ: ಪ್ರತಿ ರೈತರು ರಾಷ್ಟ್ರ ಪ್ರೇಮ ಮೆರೆಯಬೇಕು. ಪ್ರತಿ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಾಡಬೇಕು ಎಂಬುದು ರೈತ ನಾಯಕರಾಗಿದ್ದ ಎನ್.ಡಿ.ಸುಂದರೇಶ್ ಅವರ ಕನಸಾಗಿತ್ತು. ರೈತರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ರಾಷ್ಟ್ರ ಮಟ್ಟದಲ್ಲಿ ರೈತ ಸಂಘಟನೆ ಬಲಗೊಳ್ಳಬೇಕು, ರೈತರು ಸಂಘಟಿತರಾಗಬೇಕು ಎಂಬುದು ಅವರ ಆಶಯವಾಗಿತ್ತು ಎಂದು ಎನ್.ಸುಂದರೇಶ್ ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಸುಂದರೇಶ್ ಹೇಳಿದರು.

ವೀರೇಶ್ವರ ಪುಣ್ಯಾಶ್ರಮದಲ್ಲಿ ಗುರುವಾರ ಎನ್.ಡಿ.ಸುಂದರೇಶ್ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಂದರೇಶ್ ರೈತರ ಪರವಾಗಿ ಸದಾ ಮಿಡಿಯುತ್ತಿದ್ದರು. ಸರ್ಕಾರದ ವಿರುದ್ಧ ಹೋರಾಟ ರೂಪಿಸಿ ರೈತರಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದರು ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಸಂಸ್ಥಾಪಕರಾಗಿ, ಕೆಚ್ಚೆದೆಯ ಹೋರಾಟಗಾರರಾಗಿ, ರೈತಕುಲದ ಕಣ್ಮಣಿಯಾಗಿ ತಮ್ಮ ಇಡೀ ಜೀವನವನ್ನೇ ರೈತರಿಗಾಗಿ ಮುಡಿಪಾಗಿಟ್ಟ ಸುಂದರೇಶ್ ಅವರ ಜನ್ಮದಿನವನ್ನು ಅಂಧ ಸಂಗೀತ ಕಲಾವಿದರ ಜತೆಗೆ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷ ಸಂಗಮೇಶ್ವರ ಗವಾಯಿ ತಂಬೂರಿ ವಾದನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹುಮಾಯೂನ್ ಹರ್ಲಾಪುರ್, ಶಿಕ್ಷಕ ಮಂಜುನಾಥ ಮಾಶಾಳ, ಪ್ರಮುಖರಾದ ಸುಜಾತಾ ಬಸವರಾಜ್, ಎನ್.ಎಸ್. ಸುಧಾಂಶು ಮುಂತಾದವರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net