ಉದ್ಯೋಗಿಗಳಿಗೆ ನೀಡುವ ಉಚಿತ ಆಹಾರದಿಂದ ಆಗುವ ವೆಚ್ಚಕ್ಕಿಂತ ಲಾಭ ಹೆಚ್ಚು; Sundar Pichai ಮಾತಿನ ಹಿಂದಿನ ಸ್ಟ್ರಾಟಜಿ ಏನು

Google CEO Sundar Pichai
Published on

ನವದೆಹಲಿ: ಗೂಗಲ್​ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಯಾವುದಾದರೂ ಒಂದು ವಿಷಯ ತಿಳಿಯಲು, ಸ್ಥಳದ ಮಾಹಿತಿಗೆ, ವ್ಯಕ್ತಿಯ ಕುರಿತು ತಿಳಿಯಲ್ಲೂ ಇದೆ ವಿಚಾರವೆಂದಲ್ಲಾ ಯಾವುದೇ ವಿಷಯವನ್ನು ತಿಳಿಯಲು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಒಂದಲ್ಲ ಒಂದು ಮಾಹಿತಿ ಪಡೆಯಲು ಗೂಗಲ್ ಮೇಲೆ ಅವಲಂಬಿತರಾಗಿದ್ದೇವೆ.(Sundar Pichai)

ಇಂತಹ ಗೂಗಲ್​ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವ ಕನಸು ಅನೇಕರಿಗೆ ಇದೆ. ಭಾರತೀಯ ಮೂಲದ ಸುಂದರ್​ ಪಿಚೈ ಗೂಗಲ್​ ಸಿಇಒ ಎಂಬುದು ಗೊತ್ತೆ ಇದೆ. ಗೂಗಲ್​​ ಬಹಳ ದೊಡ್ಡ ಟೆಕ್​ ಕಂಪನಿಯಾಗಿದೆ. ಈ ಕಂಪನಿ ನೌಕರರಿಗೆ ಹಲವು ಸೌಲಭ್ಯವನ್ನು ಒದಗಿಸುವುದರ ಜತೆಗೆ ತನ್ನ ಎಲ್ಲ ಉದ್ಯೋಗಿಗಳಿಗೆ ಉಚಿತ ಆಹಾರವನ್ನು ಸಹ ನೀಡುತ್ತದೆ. ಅಂದರೆ ಆಹಾರದ ಸಂಪೂರ್ಣ ವೆಚ್ಚವನ್ನು ಕಂಪನಿಯೇ ಭರಿಸುತ್ತದೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಉದ್ಯೋಗಿಗಳಿಗೆ ಏಕೆ ಉಚಿತವಾಗಿ ಆಹಾರ ನೀಡಲಾಗುತ್ತದೆ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕಂಪನಿಯ ಉದ್ಯೋಗಿಗಳಿಗೆ ಉಚಿತ ಆಹಾರ ನೀಡುವುದು ಆರ್ಥಿಕ ಹೊರೆಯಲ್ಲ. ಉದ್ಯೋಗಿಗಳಿಗೆ ಉಚಿತ ಆಹಾರ ನೀಡುವುದು ಕಂಪನಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಇದು ಕೇವಲ ಅನುಕೂಲಕ್ಕಾಗಿ ಅಲ್ಲ, ಆದರೆ ಅವುಗಳು ದೊಡ್ಡ ಉದ್ದೇಶವನ್ನು ಹೊಂದಿವೆ ಎಂದಿದ್ದಾರೆ.

ಉಚಿತ ಆಹಾರದಿಂದ ಉದ್ಯೋಗಿಗಳಲ್ಲಿ ಸೃಜನಶೀಲತೆ ಹೆಚ್ಚುವುದರ ಜತೆಗೆ ಪರಸ್ಪರ ಸಂಪರ್ಕ ಸಾಧಿಸಲು ಅವಕಾಶ ಸಿಗುತ್ತದೆ. ಕೆಫೆಯಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡುವುದರಿಂದ ಹೊಸ ಆಲೋಚನೆಗಳು ಬರುತ್ತವೆ. ಈ ಆಲೋಚನೆಗಳು ಕಂಪನಿಗೆ ಪ್ರಯೋಜನಕಾರಿಯಾಗಿದೆ. ಈ ಆಲೋಚನೆಗಳು ಉಚಿತ ಆಹಾರವನ್ನು ಒದಗಿಸುವ ವೆಚ್ಚವನ್ನು ಮೀರಿಸುತ್ತದೆ. ಉಚಿತ ಊಟವು ಆರ್ಥಿಕ ಹೊರೆಯಲ್ಲ ಆದರೆ ಸೃಜನಶೀಲತೆ ಮತ್ತು ಸಮುದಾಯ ನಿರ್ಮಾಣಕ್ಕೆ ದೀರ್ಘಾವಧಿಯ ಹೂಡಿಕೆಯಾಗಿದೆ ಎಂದು ಅವರು ಹೇಳಿದರು.

ಇನ್ನು ಸುಂದರ್ ಪಿಚೈ ಅವರು ಗೂಗಲ್​ನಲ್ಲಿ ಮೊದಲು ಕೆಲಸಕ್ಕೆ ಸೇರಿದ ದಿನಗಳನ್ನು ನೆನಪಿಸಿಕೊಂಡು ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಾನು ಗೂಗಲ್‌ನಲ್ಲಿ ಮೊದಲ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾಗ ಕೆಫೆಗಳಿಗೆ ಹೋಗುತ್ತಿದ್ದೆ. ಯಾರನ್ನಾದರೂ ಭೇಟಿಯಾಗಲು ಮತ್ತು ಅವರೊಂದಿಗೆ ಮಾತನಾಡಲು ಉತ್ಸುಕನಾಗಿರುತ್ತಿದ್ದೆ. ಏಕೆಂದರೆ ಯಾವುದಾದರೂ ಒಂದು ವಿಷಯದ ಕುರಿತು ನಡೆಯುವ ಮಾತುಕತೆಗಳು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಇದೆ ಸಮಯದಲ್ಲಿ ಗೂಗಲ್​ ಉದ್ಯೋಗಿಗಳ ನೇಮಕಾತಿಯಲ್ಲಿ ಏನನ್ನು ಹುಡುಕುತ್ತದೆ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ಹುದ್ದೆಯನ್ನು ಅವಲಂಬಿಸಿ ಮಾನದಂಡಗಳು ಬದಲಾಗುತ್ತವೆ. ಎಂಜಿನಿಯರಿಂಗ್​ ಹುದ್ದೆಗಳಿಗೆ ಹೊಸ ಸವಾಲಿಗೆ ಹೊಂದಿಕೊಳ್ಳುವ ನುರಿತ ಪ್ರೋಗ್ರಾಮರ್‌ಗಳನ್ನು ಕಂಡುಹಿಡಿಯುವುದು ಮುಖ್ಯ. ನಾವು ನಿಜವಾಗಿಯೂ ಸೂಪರ್‌ಸ್ಟಾರ್ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಹುಡುಕುತ್ತಿದ್ದೇವೆ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net