ಉತ್ತಮ ಸಮಾಜಕ್ಕಾಗಿ ಶಿಕ್ಷಣ ಬಹಳ ಮುಖ್ಯ; ಡಾ. ಉಮೇಶಪ್ಪ

16-RNR-08
Published on

ರಾಣೆಬೆನ್ನೂರ: ದೇಶದ ಪ್ರಗತಿಗೆ ಹಾಗೂ ಉತ್ತಮ ಸಮಾಜ ನಿಮಾರ್ಣಕ್ಕೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಿವೃತ್ತ ಉಪ ನಿರ್ದೇಶಕ ಡಾ. ಉಮೇಶಪ್ಪ ಎಚ್​. ಹೇಳಿದರು.

ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2024&-25ನೇ ಸಾಲಿನ ವಿದ್ಯಾಥಿರ್ ಸಂಘ, ಎನ್​ಎಸ್​ಎಸ್​ ಮತ್ತು ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಭವಿಷ್ಯ ರೂಪಿಸುವ ವಿದ್ಯಾಥಿರ್ಗಳು ಸನ್ಮಾರ್ಗದಲ್ಲಿ ನಡೆಯಬೇಕು. ಶಿಕ್ಷಣ ಸಮಾಜಮುಖಿಯಾಗಿರಬೇಕು ಶಿಕ್ಷಣದ ಜೊತೆಗೆ ಸಮಾಜ ಸೇವೆ ಸೌಹಾರ್ದ ವಾತಾವರಣ ನಿಮಿರ್ಸಲು ಪ್ರಯತ್ನಿಸಬೇಕು. ನಾವು ಸಮಾಜದ ಜೊತೆಗೆ ಬೆರೆತಾಗ ಮಾತ್ರ ವಿವಿಧ ವಿಷಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಶಿಕ್ಷಣ ಕೇವಲ ನಮಗಾಗಿ ಅಲ್ಲ, ಅದು ಸಮುದಾಯದ ಏಳ್ಗೆಗೆ ಆದ್ದರಿಂದ ವಿದ್ಯಾಥಿರ್ಗಳಲ್ಲಿ ಛಲ -ಬಲ ಇದ್ದಲ್ಲಿ ಸಾಧನೆ ಕಷ್ಟವೆನಲ್ಲ ಎಂದರು.

ಪ್ರಾಚಾರ್ಯರಾದ ಪಿ. ಮುನಿಯಪ್ಪ ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಆರ್​.ಬಿ. ತೋಟಗೇರ, ಎಂ.ಎಸ್​. ಅರಳಿ, ಆರ್​.ಬಿ. ದೊಡ್ಡನಾಗಳ್ಳಿ, ಬಿ.ಕೆ. ಕೊಟ್ಟದ, ಚನ್ನಗೌಡ ಕುಡಪಲಿ, ಶಂಕ್ರಪ್ಪ ತರಗನಹಳ್ಳಿ, ಮಾಲತೇಶ ಕಾಕೋಳ, ಎಚ್​. ಶಿವಾನಂದ, ಮಹೇಶ ತೂರ್ಕೆ, ಕರಬಸಪ್ಪ ಗುಗ್ಗರಿ, ಮಲ್ಲಿಕಾರ್ಜುನ ಎಂ., ಸಂತೋಷ ಅಂಗಡಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net