

ರಾಣೆಬೆನ್ನೂರ: ವಿದ್ಯಾಥಿರ್ಗಳು ಓದುವುದರ ಜತೆಗೆ ಉತ್ತಮ ಸಂಸ್ಕಾರ ಕಲಿತುಕೊಳ್ಳಬೇಕು ಸ್ಥಳಿಯ ಸಲಹಾ ಸಮಿತಿಯ ಉಪಾಧ್ಯ ಆರ್.ಬಿ. ತೋಟಗೇರ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್ನ ರಾಷ್ಟ್ರೀಯ ಸೇವಾ ಯೋಜನಾ ಟಕದ ವತಿಯಿಂದ 2024&25ನೇ ಸಾಲಿನ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಥಿರ್ಗಳು ಶಿಣದ ಜತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಜೀವನದಲ್ಲಿ ಆದರ್ಶ ವ್ಯಕ್ತಿಗಳಾಗಿ, ಒಳ್ಳೆಯ ಗುಣ ಸೌಭಾವವನ್ನು ಬೆಳಸಿಕೊಳ್ಳಬೇಕು ಎಂದರು.
ಸಂಜೀವಿನಿ ಕಾಲೇಜ್ನ ಪ್ರಾಚಾರ್ಯ ಪ್ರಭುಲಿಂಗ ಕೋಡದ ಮಾತನಾಡಿ, ಶಿಣದ ಜತೆಗೆ ಉತ್ತಮ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಪಿ. ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಗ್ರಂಥಪಾಲಕ ಹನುಮಂತರಾಜ, ಎಚ್. ಶಿವಾನಂದ, ಉಪನ್ಯಾಸಕರಾದ ಸಂತೋಷ ಅಂಗಡಿ, ರೇವಣ್ಣ ನಾಯ್ಕ್, ಪಿ.ಟಿ. ಮುರನಾಳ, ಕೆ.ಎಚ್. ಗುಗ್ಗರಿ, ಪೂಣಿರ್ಮಾ ಮಾಗನೂರು, ಶಿವಮೂರ್ತಯ್ಯ ಎಚ್., ಎಂ. ಪ್ರಕಾಶ ಪಿ., ಕವಿತಾ ಪುಟ್ಟನಗೌಡ್ರ, ಆರ್.ಪ್ರವಿಣಕುಮಾರ, ಜಗದೀಶ ಕೊರವರ ಮತ್ತಿತರರು ಉಪಸ್ಥಿತರಿದ್ದರು.