ಪಠ್ಯೇತರ ಚಟುವಟಿಕೆ ಮಕ್ಕಳಲ್ಲಿ ಸಂಸ್ಕಾರ ಕಲಿಸುತ್ತವೆ; ಬಸವರಾಜ ಶಿವಣ್ಣನವರ

je721538035802367-abc
Published on

ರಾಣೆಬೆನ್ನೂರ: ಶಾಲಾ-ಕಾಲೇಜ್‌ಗಳಲ್ಲಿ ಆಯೋಜಿಸುವ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ಮಕ್ಕಳಲ್ಲಿ ಸಂಸ್ಕಾರ ಕಲಿಸುತ್ತವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಕಾಲೇಜ್ ಅಭಿವೃದ್ದಿ ಸಮಿತಿ ಸದಸ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪದವಿಯಿಂದ ಮಾತ್ರ ವ್ಯಕ್ತಿತ್ವ ವಿಕಾಸನವಾಗುವುದಿಲ್ಲ. ತಂದೆ, ತಾಯಿ, ಶಿಕ್ಷಕರನ್ನು ಮತ್ತು ಸಮಯವನ್ನು ಯಾರು ಗೌರವಿಸುತ್ತಾರೆ. ಶ್ರದ್ಧೆ ಭಕ್ತಿಯಿಂದ ನಡೆಯುತ್ತಾರೆ ಅವರು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಎಂದರು.
ಪ್ರಾಚಾರ್ಯ ಆರ್.ಎಫ್. ಅಯ್ಯನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್ ಅಭಿವೃದ್ಧಿ ಮಂಡಳಿ ಸದಸ್ಯರಾದ ಎಚ್. ಶಿವಾನಂದ ಹಾಗೂ ಬಿ.ಕೆ. ಕೊಟ್ಟದ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಡಾ. ಎಚ್. ಓಂಕಾರನಾಯ್ಕ, ಲೋಹಿಯಾ ಕೆ.ಜೆ.ಆರ್., ಡಾ. ಬಸವರಾಜ ಹುಗ್ಗಿ, ಡಾ. ಹನುಮಂತರಾಜ ಎನ್.ಬಿ., ಮಂಜುನಾಥ ಎನ್.ಜಿ., ಯಮನಾ ನಾಯ್ಕ, ಡಾ. ಎಸ್.ಐ. ಮಲ್ಲಿಗಾರ, ಡಾ. ಹೊನ್ನಪ್ಪ, ಡಾ. ಶೋಭಾ ನಂದಿಹಳ್ಳಿ, ರೂಪಾ ಮುದಿಗೌಡರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net