ಅಂಬೇಡ್ಕರ್​ ಅವರು ನೀಡಿದ ಸಂವಿಧಾನ ಶ್ರೇಷ್ಠವಾಗಿದೆ

je721538035802367-abc
Published on

ರಾಣೆಬೆನ್ನೂರ: ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ನೀಡಿರುವ ಸಂವಿಧಾನವೇ ಶ್ರೇಷ್ಠವಾಗಿದೆ ಎಂದೂ ಸ್ಥಳಿಯ ಸಲಹಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಅರಳಿ ಹೇಳಿದರು.

ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್​ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ದೇಶದಲ್ಲಿ ಇರದಂಥ ವಿಶಿಷ್ಟ ಶ್ರೇಷ್ಠ ಸಂವಿಧಾನವನ್ನು ಭಾರತ ಹೊಂದಿದೆ. ಇದನ್ನು ಸೃಷ್ಠಿಸಿದ ಶ್ರೇಯಸ್ಸು ಡಾ. ಬಿ.ಆರ್​. ಅಂಬೇಡ್ಕರ್​ ಅವರಿಗೆ ಸಲ್ಲುತ್ತದೆ ಎಂದರು.

ಉಪನ್ಯಾಸಕ ಮಾಲತೇಶ ಹೊನ್ನಮ್ಮನವರ ಮಾತನಾಡಿ, ಸಂವಿಧಾನ ನಮಗೆ ಎಲ್ಲ ರೀತಿಯ ಹಕ್ಕುಗಳನ್ನು ಕೊಟ್ಟಿದೆ. ಅದೇ ರೀತಿ ಕರ್ತವ್ಯ ಕೊಟ್ಟಿದೆ. ನಮ್ಮ ಸಂವಿಧಾನದಲ್ಲಿ 25 ವಿಭಾಗಗಳಲ್ಲಿ 448 ವಿಧಿಗಳು, 12 ಪರಿಚ್ಛೇದಗಳು,5 ಅನುಬಂಧಗಳನ್ನು ಹೊಂದಿದೆ. ಡಾ. ಬಿ.ಆರ್​. ಅಂಬೇಡ್ಕರ್​ ಅವರು ಬೇರೆ ಬೇರೆ ದೇಶಗಳ ಸಂವಿಧಾನ ಓದಿ ಅದರಲ್ಲಿರುವ ಮುಖ್ಯಂಶಗಳನ್ನು ಆಯ್ದು ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಪ್ರಾಚಾರ್ಯ ಪಿ. ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಚ್​. ಶಿವಾನಂದ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ಹಿರಿಯ ಉಪನ್ಯಾಸಕ ರೇವಣ್ಣನ ನಾಯ್ಕ, ಆರ್​.ಬಿ. ತೋಟಿಗೇರ, ಮಲ್ಲಿಕಾರ್ಜುನ ಮುರನಾಳ, ಕೆ.ಎಚ್​. ಗುಗ್ಗರಿ, ಸಂತೋಷ ಅಂಗಡಿ, ರ್ಪೂಣಿಮಾ ಮಾಗನೂರು, ಬಿ.ಕೆ. ಕೊಟ್ಟದ, ಪರಮೇಶ್ವರಪ್ಪ ಹಲಗೇರಿ, ಆರ್​.ಪ್ರವಿಣಕುಮಾರ, ಮಕಂದರ.ಎಸ್​., ಜಗದೀಶ ಕೋರಗರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net