ಬೆಂಗಳೂರು:
ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟು ಓದಿದಾಗ ಮಾತ್ರ ಸಮಾಜದ ಅತ್ಯುನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಪ್ರಾಂಶುಪಾಲೆ ಧನಲಕ್ಷ್ಮಿ ತಿಳಿಸಿದರು.
ರಾಜಗೋಪಾಲನಗರದ ಸನ್ ರೈಸ್ ಪಬ್ಲಿಕ್ ಸ್ಕೂಲ್ಗೆ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಮಹೇಶ್.ಎ.ಆರ್. ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಯಲ್ಲಿ ಸಾಗಬೇಕಾದರೆ ವಿದ್ಯಾರ್ಥಿಗಳು ನಿರಂತರ ಅಭ್ಯಾಸದ ಜೊತೆಗೆ ಜ್ಞಾನಾರ್ಜನೆಗೆ ಒತ್ತು ನೀಡಬೇಕು ಆಗ ಮಾತ್ರ ’ಬಡ ’ ಎಂಬ ಕನ್ನಡದ ಅರ್ಥ ಹೋಗಿ ಹಿಂದಿಯ ’ಬಡ ’ಅರ್ಥ ಬರಲು ಸಾಧ್ಯವಾಗುತ್ತದೆ ಎಂದರು
ಶಿಕ್ಷಕಿ ನೇತ್ರಾವತಿ ಸ್ವಾಗತಿಸಿದರು. ರತಿ .ಓ. ರಾಮ್ , ಸುಜಾತ ಪ್ರಕಾಶ್ ಮಹಾಲೆ, ಮಹಾಲಕ್ಷ್ಮಿ , ಸಾಯಿ ಅಕಾಡೆಮಿ ಮಹೇಶ್ ನಾಗರಾಜು ಕಾರ್ಯಕ್ರಮ ನಿರೂಪಿಸಿದರು ಮತ್ತೋರ್ವ ಶಿಕ್ಷಕಿ ಮಹಾಲಕ್ಷ್ಮಿ ವಂದಿಸಿದರು.