ಇನ್ಫೋಸಿಸ್ ಸಿಇಒ ಸಲೀಲ್​ ಪಾರೇಖ್​ಗೆ ಹಣಕಾಸು ಸಚಿವಾಲಯದ ಸಮನ್ಸ್

Infosys
Published on

ನವದೆಹಲಿ: ಆದಾಯ ತೆರಿಗೆ ಇಲಾಖೆಯ ಹೊಸ ವೆಬ್​ಸೈಟ್ ಆರಂಭಗೊಂಡು ಎರಡು ತಿಂಗಳು ಕಳೆದಿದ್ದರೂ ಇನ್ನೂ ಹಲವು ತಾಂತ್ರಿಕ ದೋಷಗಳು ನಿವಾರಣೆ ಆಗದ ಹಿನ್ನೆಲೆಯಲ್ಲಿ, ಈ ವೆಬ್​ಸೈಟ್ ನಿರ್ವಹಿಸುತ್ತಿರುವ ಇನ್ಪೋಸಿಸ್ ಕಂಪನಿಯ ಸಿಇಒ ಸಲೀಲ್ ಪಾರೇಖ್​ಗೆ

ಕೇಂದ್ರ ಹಣಕಾಸು ಸಚಿವಾಲಯ ಸಮನ್ಸ್ ನೀಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎದುರು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಪೋರ್ಟಲ್ ಆರಂಭವಾದಾಗಿನಿಂದಲೂ ಹಲವು ದೋಷಗಳು ಕಂಡುಬರುತ್ತಿವೆ. ಆ. 21ರಿಂದ ಈ ಸಮಸ್ಯೆ ತೀವ್ರಗೊಂಡಿದೆ. ಎರಡೂವರೆ ತಿಂಗಳು ಕಳೆದರೂ ತಾಂತ್ರಿಕ ಸಮಸ್ಯೆ ನಿವಾರಣೆ ಆಗದ ಕಾರಣ ಈ ಸಮನ್ಸ್ ನೀಡಲಾಗಿದೆ. ಜನವರಿ 2019ರಿಂದ 2021 ಜೂನ್ ವರೆಗೆ ಪೋರ್ಟಲ್ ಆರಂಭ ಹಾಗೂ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಇನ್ಪೋಸಿಸ್​ಗೆ 164.5 ಕೋಟಿ ರೂ. ಪಾವತಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net