ಸ್ವಾಭಿಮಾನ ಇದ್ದವರು ಜೆಡಿಎಸ್ ಪಕ್ಷದಲ್ಲಿ ಇರಲ್ಲ: ಸುಮಲತಾ ಅಂಬರೀಶ್

Sumalatha Ambareesh
ಸುಮಲತಾ ಅಂಬರೀಷ್​
Published on

ಮಂಡ್ಯ : ಸ್ವಾಭಿಮಾನ ಇದ್ದವರು ಜೆಡಿಎಸ್ ಪಕ್ಷದಲ್ಲಿ ಇರಲ್ಲ ಎಂದು ಹೇಳುವ ಮೂಲಕವಾಗಿ ಪರೋಕ್ಷವಾಗಿ ಜೆಡಿಎಸ್‌ಗೆ ಸ್ವಾಭಿಮಾನ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಜೆಡಿಎಸ್ ವಿರುದ್ಧ ಸ್ವಾಭಿಮಾನದ ಹೆಸರಲ್ಲಿ ಬಂಡಾಯ ಎದ್ದಿರುವ ವಿಚಾರ. ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿದ್ದಾರೆ. ಸ್ವಾಭಿಮಾನ ಇದ್ದವರು ಜೆಡಿಎಸ್ ಪಕ್ಷದಲ್ಲಿ ಇರಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಯೋಗಿ ಆದಿತ್ಯನಾಥ್ ಮಂಡ್ಯ ಭೇಟಿ ವಿಚಾರವಾಗಿ ಮಾತನಾಡಿ, ಯೋಗಿ ಅವರ ಪ್ರವಾಸದಿಂದ‌ ಮಂಡ್ಯದಲ್ಲಿ ಬಿಜೆಪಿ ಮತ್ತಷ್ಟು ಬಲ ಆಗುತ್ತದೆ. ಯೋಗಿ ಅವರನ್ನು ನೋಡಿಕೊಂಡು ಮತ ಹಾಕುವವರ ಸಂಖ್ಯೆ ಮಂಡ್ಯದಲ್ಲಿ. ಅವರ ಆಗಮ ನಮಗೆ ಖುಷಿ ತಂದಿದೆ ಎಂದಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಪರ ರಮ್ಯ ಪ್ರಚಾರ ವಿಚಾರವಾಗಿ ಮಾತನಾಡಿ, ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ. ಅವರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಬರ್ತಾರೆ.ಅವರು ಪ್ರಚಾರಕ್ಕೆ ಬಂದ್ರೆ ನನಗೆ ಏನು ಸಮಸ್ಯೆ ಇಲ್ಲ. ಅವರ ಕೆಲಸ ಅವರು ಮಾಡಲಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಬಿಜೆಪಿ ಪರ ನಾನು ಕ್ಯಾಂಪೇನ್ ಮಾಡುತ್ತಾ ಇದ್ದೇನೆ. ಜನರಿಂದ‌ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಂಡ್ಯದಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net