ಹುಸಿಯಾದ ನಿರೀಕ್ಷೆ: ಸಂಸದೆ ಸುಮಲತಾಗೆ ಶುರುವಾಯ್ತು ರಾಜಕೀಯ ಭವಿಷ್ಯದ ಭಯ

Sumalatha Ambareesh
ಸುಮಲತಾ ಅಂಬರೀಷ್​
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಈ ಬಾರಿ ಜನ ಬದಲಾವಣೆ ಬಯಸುತ್ತಿದ್ದಾರೆ. ಖಂಡಿತವಾಗಿ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಅಂತ ಹೇಳಿಕೊಂಡು ಓಡಾಡುತ್ತಿದ್ದ ಸಂಸದೆ ಸುಮಲತಾ ಅಂಬರೀಷ್​ ಅವರಿಗೆ ಚುನಾವಣಾ ಫಲಿತಾಂಶದಿಂದ ಭಾರೀ ಮುಖಭಂಗವಾಗಿದೆ.

ಮೊದಲ ಟಾಸ್ಕ್​ನಲ್ಲೇ ಫೇಲ್​

ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ ಬಳಿಕ ಮೊದಲ ಟಾಸ್ಕ್​ನಲ್ಲೇ ಸಂಸದೆ ಸುಮಲತಾ ಫೇಲ್ ಆಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಒಂದೇ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಿಕೊಳ್ಳುವಲ್ಲಿ ಸುಮಲತಾ ಅಂಬರೀಷ್​ ವಿಫಲವಾಗಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಅಲ್ಲದೆ, ಬಿಜೆಪಿ ಗೆಲ್ಲಿಸುವ ಪಣತೊಟ್ಟಿದ್ದರು. ಆದರೆ, ಹೊರಬಿದ್ದಿರುವ ಫಲಿತಾಂಶ ಸುಮಲತಾಗೆ ಮುಖಭಂಗವಾಗಿದೆ.

ಸುಮಕ್ಕಗೆ ಬಿಗ್​ ಶಾಕ್

ಇನ್ನೂ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ರೆಬೆಲ್ ಲೇಡಿಗೆ ರಾಜಕೀಯ ಭವಿಷ್ಯದ ಭಯ ಶುರುವಾಗಿದೆ. ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದ ಸುಮಕ್ಕಗೆ ಇದೀಗ ಬಿಗ್​ ಶಾಕ್ ಎದುರಾಗಿದೆ. ಸಕ್ಕರೆ ನಾಡಿನಲ್ಲಿ ಗೆಲುವು ಸಾಧಿಸುವುದಿರಲಿ ಕನಿಷ್ಠ ಪೈಪೋಟಿ ಕೊಡುವುದಕ್ಕೂ ಬಿಜೆಪಿ ವಿಫಲವಾಗಿದ್ದು, ಸುಮಲತಾ ಅವರಿಗೆ ಮುಂದಿನ ರಾಜಕೀಯ ಹಾದಿ ಕಠಿಣ ಎಂಬಂತೆ ಭಾಸವಾಗುತ್ತಿದೆ.

ಲೋಕಸಭಾ ಚುನಾವಣೆಗೆ ಇನ್ನೊಂದೆ ವರ್ಷ ಬಾಕಿ ಇದೆ. ಈ ಚುನಾವಣೆಯಲ್ಲೂ ಹಿನ್ನೆಡೆ ಅನುಭವಿಸುವ ಭಯ ಸುಮಕ್ಕನಿಗೆ ಕಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್​ಗೆ ಸೆಡ್ಡು ಹೊಡೆಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ಹೀನಾಯ ಸೋಲಿನೊಂದಿಗೆ ರಾಜಕೀಯ ಭವಿಷ್ಯವೇ ಕಮರುವ ಭೀತಿಯಲ್ಲಿ ಸುಮಲತಾ ಇದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net