ಬಿಜೆಪಿಗೆ ಬೆಂಬಲ ಘೋಷಣೆ ಹಿಂದಿದೆ ಸುಮಲತಾ ಅಂಬರೀಷ್​ ಮೆಗಾ ಪ್ಲಾನ್!

Sumalatha Ambareesh
ಸುಮಲತಾ ಅಂಬರೀಷ್​
Published on

ಮಂಡ್ಯ: ಸಕ್ಕರೆ ನಾಡಿನ ಸ್ವಾಭಿಮಾನಿ ಸಂಸದೆ ಎಂದೇ ಹೆಗ್ಗಳಿಕೆ ಹೊಂದಿರುವ ಸುಮಲತಾ ಅಂಬರೀಷ್​ ಅವರು ಭಾರತೀಯ ಜನತಾ ಪಾರ್ಟಿಗೆ ಸಂಪೂರ್ಣ ಬೆಂಬಲ ಕೋರಿರುವುದರ ಹಿಂದೆ ಭಾರೀ ಲೆಕ್ಕಾಚಾರವೇ ಇದೆ ಎಂದು ರಾಜಕೀಯ ವಲಯದಲ್ಲಿ ಬಹು ಚರ್ಚೆ

ಬಿಜೆಪಿಗೆ ಬೆಂಬಲ ಘೋಷಣೆ ಹಿಂದೆ ಸುಮಲತಾ ಮೆಗಾ ಪ್ಲಾನ್ ಮಾಡಿದ್ದಾರೆ. ಜೆಡಿಎಸ್​ ಭದ್ರಕೋಟೆಯನ್ನು ಛಿದ್ರ ಮಾಡಲು ಕಮಲ ಪಾಳೆಯಕ್ಕೆ ರೆಬೆಲ್​ ಲೇಡಿ ಬೆಂಬಲ ನೀಡಿದ್ದಾರೆ. ಜೆಡಿಎಸ್​ ಅನ್ನು ಟಾರ್ಗೆಟ್​ ಮಾಡಿರುವ ಸುಮಲತಾ, ಬಿಜೆಪಿ ಜೊತೆಗೂಡಿ ಜೆಡಿಎಸ್​ ಹಣಿಸಲು ಪ್ಲಾನ್​ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆ ಜೆಡಿಎಸ್ ಸೋಲಿಸಲು ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದಾರೆ. ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿಗೆ ಬೆಂಬಲ ಘೋಷಣೆ ಮಾಡುತ್ತಿದ್ದಂತೆ ದಳಪತಿಗಳ ವಿರುದ್ಧ ಸುಮಲತಾ ವಾಗ್ದಾಳಿ ಮಾಡಿದರು. ಮಾತಿನ ಉದ್ದಕ್ಕೂ ಜೆಡಿಎಸ್​ ನಾಯಕರನ್ನು ಟೀಕಿಸಿದರು.

ಜೆಡಿಎಸ್ ವಿರುದ್ಧ ಕುಟುಂಬ ರಾಜಕೀಯ ಅಸ್ತ್ರವನ್ನು ಸುಮಲತಾ ಪ್ರಯೋಗ ಮಾಡಿದ್ದಾರೆ. ಜೆಡಿಎಸ್ ನಾಯಕರು ಕುಟುಂಬ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ್ದಾರೆ. ಜೆಡಿಎಸ್ ಶಾಸಕರು ಅಭಿವೃದ್ಧಿ ಮಾಡದೆ ರಾಜಕೀಯ ಮಾಡ್ತಿದ್ದಾರೆ. ಹೀಗಾಗಿ ಮಂಡ್ಯ ರಾಜಕೀಯದಲ್ಲಿ ಬದಲಾವಣೆ ಅವಶ್ಯಕತೆ ಇದೆ. ಕಲುಷಿತ ರಾಜಕಾರಣವನ್ನು ಸ್ವಚ್ಛ ಮಾಡಬೇಕೆನ್ನುವ ಮೂಲಕ ಜೆಡಿಎಸ್ ವಿರುದ್ಧ ಸುಮಲತಾ ಸಮರ ಘೋಷಿಸಿದ್ದಾರೆ.

ಬಿಜೆಪಿಗೆ ಬಲ

ಸುಮಲತಾ ಬೆಂಬಲದಿಂದ ಮಂಡ್ಯದಲ್ಲಿ ಬಿಜೆಪಿಗೆ ಆನೆ ಬಲ ಬಂದಿದೆ. ಜಿಲ್ಲೆಯಲ್ಲಿ ಬೇರು ಬಿಡುತ್ತಿರುವ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಸುಮಲತಾ ಬೆಂಬಲ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಹೆಚ್ಟಿಸಿದ್ದು, ಜೆಡಿಎಸ್ ವಿರುದ್ಧ ಮಾಸ್ ಲೀಡರ್ ಸಿಕ್ಕ ಖುಷಿಯಲ್ಲಿ ಕಮಲ ಪಾಳಯವಿದೆ. ಅಂಬರೀಷ್ ಅಭಿಮಾನಿಗಳು ಕೂಡ ಬಿಜೆಪಿ ಪರ ನಿಲ್ತಾರೆಂಬ ಲೆಕ್ಕಾಚಾರ ಶುರುವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net