ನಿಮ್ಮ ಮದುವೆ ಬಗ್ಗೆ ಹೇಳಿ… ಸಿನಿಮಾ ವೇದಿಕೆಯಲ್ಲಿ ನಟ ನರೇಶ್​ ಕೊಟ್ಟ ಉತ್ತರ ಹೀಗಿತ್ತು….

Naresh Pavithra Lokesh
Published on

ಹೈದರಾಬಾದ್​: ನಿನ್ನೆಯಷ್ಟೇ ಮದುವೆ ವಿಡಿಯೋ ಪೋಸ್ಟ್​ ಮಾಡಿ ನಟ ನರೇಶ್​ ಅವರು ಎಲ್ಲರಿಗೂ ಸರ್ಪ್ರೈಸ್​ ನೀಡಿದ್ದರು. ನಟಿ ಪವಿತ್ರಾ ಲೋಕೇಶ್​ ಅವರನ್ನು ವರಿಸಿರುವ ನರೇಶ್​, ಹೊಸ ಪ್ರಯಾಣದಲ್ಲಿ ಜೀವನ ಪರ್ಯಂತ ಸಂತೋಷ ಮತ್ತು ನೆಮ್ಮದಿಗಾಗಿ ನಿಮ್ಮೆಲ್ಲರ ಆಶೀರ್ವಾದ ಬಯಸುತ್ತಿದ್ದೇವೆ ಎಂದು ಕೋರಿದ್ದರು.

ಇದೀಗ ಮದುವೆ ಕುರಿತು ಅಧಿಕೃತವಾಗಿ ವೇದಿಕೆಯಲ್ಲೇ ಮಾತನಾಡಿದ್ದಾರೆ. ನಿನ್ನೆ ಸಂಜೆ ಇಂತಿಂತಿ ರಾಮಾಯಣಂ ಸಿನಿಮಾದ ಪ್ರಮೋಷನಲ್​ ಈವೆಂಟ್​ನಲ್ಲಿ ನರೇಶ್​ ಭಾಗಿಯಾಗಿದ್ದರು. ಈ ವೇಳೆ ಮದುವೆ ಬಗ್ಗೆ ಅವರನ್ನು ಕೇಳಲಾಯಿತು. ಆದರೆ, ಅದರ ಬಗ್ಗೆ ಮಾತನಾಡಲು ನರೇಶ್​ ಇಷ್ಟಪಡಲಿಲ್ಲ. ಬದಲಾಗಿ ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದರು.

ನನ್ನ ವೈಯಕ್ತಿಕ ಜೀವನದ ಸಂಗತಿಗಳನ್ನು ಸಿನಿಮಾ ವೇದಿಕೆ ಮೇಲೆ ಮಾತನಾಡಲು ಬಯಸುವುದಿಲ್ಲ. ಶೀಘ್ರದಲ್ಲೇ ಪತ್ರಿಕಾಗೋಷ್ಠಿಯಲ್ಲಿ ನಾನು ಖಂಡಿತವಾಗಿಯೂ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತೇನೆ. ನಾನು ಯಾವಾಗಲೂ ಮಾಧ್ಯಮ ಸ್ನೇಹಿ ಕಲಾವಿದ. ಪ್ರತಿಯೊಬ್ಬರಿಗೂ ರೀಲ್ ಲೈಫ್ ಮತ್ತು ರಿಯಲ್ ಲೈಫ್ ಇರುತ್ತದೆ ಎಂದು ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಈ ಸಿನಿಮಾ ಈವೆಂಟ್​ ಅನ್ನು ಬೇರೆ ವಿಷಯಗಳಿಗೆ ತಿರುಗಿಸಲು ನಾನು ಬಯಸುವುದಿಲ್ಲ ಎಂದು ನರೇಶ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಸಿತಾರಾ ಎಂಟರ್‌ಟೈನ್‌ಮೆಂಟ್ಸ್‌ನ ನಿರ್ಮಾಪಕ ಎಸ್.ನಾಗ ವಂಶಿ ಅವರು ಪ್ರೇಕ್ಷಕರ ನಾಡಿಮಿಡಿತವನ್ನು ಬಲ್ಲ ಹೊಸ ತಲೆಮಾರಿನ ನಿರ್ಮಾಪಕ ಎಂದು ಬಣ್ಣಿಸಿದರು. ರಾಹುಲ್ ರಾಮಕೃಷ್ಣ ಮತ್ತು ನವ್ಯಾ ಸ್ವಾಮಿ ಜೊತೆಯಾಗಿ ನಟಿಸಿರುವ 'ಇಂತಿಂತಿ ರಾಮಾಯಣಂ' ಇದೇ ತಿಂಗಳ ಕೊನೆಯಲ್ಲಿ ತೆರೆಗೆ ಬರಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net