ಸುಳ್ಯ ಕೊಡಗು ಗಡಿ ಭಾಗದಲ್ಲಿ ಭಾರಿ ಶಬ್ದದೊಂದಿಗೆ ಮತ್ತೆ ಕಂಪಿಸಿದ ಭೂಮಿ

IMG_20220710_072416
Published on

ಮಂಗಳೂರು: ಸುಳ್ಯ, ಕೊಡಗು ಗಡಿ ಭಾಗದಲ್ಲಿ ಎಂಟನೇ ಬಾರಿಗೆ ಭಾರಿ ಶಬ್ದದೊಂದಿಗೆ ಭಾನುವಾರ ಬೆಳಗ್ಗೆ 6.24 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಸುಳ್ಯ, ಅರಂತೋಡು, ಸಂಪಾಜೆ, ಪೆರಾಜೆ, ಎಲಿಮಲೆ, ಮರ್ಕಂಜ, ಕೊಡಗು ಸಂಪಾಜೆ ಸೇರಿದಂತೆ ಹಲವು ಭಾಗಗಳಲ್ಲಿ ಈ ಅನುಭವ ಉಂಟಾಗಿದೆ.
ಮಲಗಿದ್ದ ನಾನು ಶಬ್ದಕ್ಕೆ ಬೆಚ್ಚಿಬಿದ್ದೆ. ಗಡ ಗಡ ಅಲ್ಲಾಡಿದ ಅನುಭವವಾಯಿತು ಎಂದು ಬಡ್ಡಡ್ಕದಿಂದ ಕಿರಣ್ ಅನುಭವ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net