

ರೋಬ್: ಸಾರ್ವಜನಿಕ ರ‍್ಯಾಲಿಯೊಂದರ ವೇಳೆ ಆತ್ಮಾಹುತಿ ಬಾಂಬರ್ ವ್ಯಕ್ತಿಯೊಬ್ಬ ತನ್ನನ್ನ ತಾನೇ ಸ್ಪೋಟಿಸಿಗೊಂಡ ಘಟನೆ ಬಲೂಚಿಸ್ತಾನದ ರೋಬ್‌ನಲ್ಲಿ ನಡೆದಿದೆ. ಈ ಕೃತ್ಯವು ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯಲ್ಲಿ ಕನಿಷ್ಠ 7 ಮಂದಿ ಗಾಯಗೊಂಡಿದ್ದು, ನಾಲ್ಕು ಜನರ ಸ್ಥಿತಿ ಚಿಂತಾಜನಕವಾಗಿದೆ.
ಬಲೂಚಿಸ್ತಾನದ ರೋಬ್‌ನಲ್ಲಿ ತನ್ನ ಮೇಲೆ ನಡೆದ ಆತ್ಮಹತ್ಯಾ ದಾಳಿ ಸ್ವಲ್ಪದರಲ್ಲೇ ತಪ್ಪಿದ ನಂತರ ಜಮಾತ್-ಎ-ಇಸ್ಲಾಮಿ ಮುಖ್ಯಸ್ಥ ಸಿರಾಜ್ ಉಲ್ ಹಕ್ ಮಾತನಾಡಿ ತಾವು ಸಾವಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಆತ್ಮಹತ್ಯಾ ಸ್ಫೋಟವನ್ನು ಖಂಡಿಸಿದ್ದು, ದಾಳಿಯ ಬಗ್ಗೆ ಕೂಲಂಕುಷ ತನಿಖೆ ನಡೆಸುವಂತೆ ಬಲೂಚಿಸ್ತಾನ್ ಸರ್ಕಾರವನ್ನು ಕೋರಿದ್ದಾರೆ. ಬಲೂಚಿಸ್ತಾನ ಮುಖ್ಯಮಂತ್ರಿ ಅಬ್ದುಲ್ ಖುದ್ದೂಸ್ ಬಿಜೆಂಜೊ ಕೂಡ ಈ ಘಟನೆಯನ್ನು ಖಂಡಿಸಿದ್ದು, ದಾಳಿಯ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್)