

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಮಾ. 15ರಿಂದ 19ರವರೆಗೆ ಜರುಗಲಿದೆ.
15ರಂದು ಬೆಳಗ್ಗೆ 8 ಗಂಟೆಗೆ ಕಂಕಣಧಾರಣೆ ಮಾಡುವುದು. 16ರಂದು ಸಂಜೆ 5ಕ್ಕೆ ಕಳಸಾರೋಹಣ, 17ರಂದು ಬೆಳಗ್ಗೆ 9 ಗಂಟೆಗೆ ಹೂವಿನ ರಥೋತ್ಸವ, 18ರಂದು ಮಹಾರಥೋತ್ಸವ ಹಾಗೂ ಗುಗ್ಗಳ, ಎತ್ತಿನ ಬಂಡಿ ಮೆರವಣಿಗೆ ಜರುಗಲಿದೆ. 19ರಂದು ಬೆಳಗ್ಗೆ 10 ಗಂಟೆಗೆ ಓಕಳಿ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ಪ್ರಕಟಣೆ ತಿಳಿಸಿದೆ.