ಕುವೆಂಪು ಶತಮಾನೋತ್ಸವ ಕಾಲೇಜಿನಲ್ಲಿ ಕಳೆಗಟ್ಟಿದ ಸುಗ್ಗಿ ಸಂಭ್ರಮ

suggi sambrama kuvempu shatamanosta college
ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಬಣ್ಣಬಣ್ಣದ ಸೀರೆಯುಟ್ಟು ಮಿಂಚಿದರು.
Published on

ಶಿವಮೊಗ್ಗ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಅಂಗವಾಗಿ ಬಾಲರಾಜ ಅರಸ್ ರಸ್ತೆಯ ಜಿಲ್ಲಾ ಒಕ್ಕಲಿಗರ ಸಂಘದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ಸುಗ್ಗಿಯ ಸಂಭ್ರಮ ಮನೆ ಮಾಡಿತ್ತು.

ಚಿತ್ತಾಕರ್ಷಕ ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಹಳ್ಳಿಯ ಸೊಗಡನ್ನು ಸೃಷ್ಟಿಸಲಾಗಿತ್ತು. ಪ್ರಶಿಕ್ಷಣಾರ್ಥಿಗಳು ಬಣ್ಣಬಣ್ಣ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಕಂಗೊಳಿಸಿದರು.
ಮಹಾವಿದ್ಯಾಲಯಕ್ಕೆ ಕಾಲಿಡುತ್ತಿದ್ದಂತೆ ಹಳ್ಳಿ ವಾತಾವರಣ ಸೃಷ್ಟಿಸುವ ಪ್ರವೇಶ ದ್ವಾರ, ವಿವಿಧ ಬಗೆಯ ಬಣ್ಣಗಳಿಂದ ಸಿಂಗಾರಗೊಂಡ ರಂಗೋಲಿಗಳು, ದವಸ ಧಾನ್ಯಗಳಿಂದ ಅಲಂಕಾರಗೊಂಡಿದ್ದ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಸುಗ್ಗಿ ಸಂಭ್ರಮ ಮತ್ತು ಸಾಂಪ್ರದಾಯಿಕ ದಿನ ಉದ್ಘಾಟನೆಗೊಂಡಿತು.
ಇಡೀ ದಿನ ಮಹಾವಿದ್ಯಾಲಯದಲ್ಲಿ ಗ್ರಾಮೀಣ ಸೊಗಡಿನ ಸುಗ್ಗಿ ಸಂಭ್ರಮ ಮನೆ ಮಾಡಿತ್ತು. ಪ್ರತಿದಿನ ಶಿಕ್ಷಣ ಸಂಸ್ಥೆಯ ಸಮವಸ್ತ್ರ(ಸೀರೆ)ದೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಪ್ರಶಿಕ್ಷಣಾರ್ಥಿಗಳು ಬಣ್ಣಬಣ್ಣದ ಸೀರೆಯುಟ್ಟು ಮಿಂಚಿದರು. ಬಳಿಕ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net