ಸಿಎಂ ಬೊಮ್ಮಾಯಿ ಪುತ್ಥಳಿಗೆ ರಕ್ತಾಭಿಷೇಕ! ತಮ್ಮ ದೇಹದಿಂದ ರಕ್ತ ಬಸಿದು ಮಂಡ್ಯ ರೈತರ ಆಕ್ರೋಶ

Basavaraj-Bommai-Office-Facebook-08092021-1200_0_0
Published on

ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ಥಳಿಗೆ ಮಂಡ್ಯದಲ್ಲಿ ರೈತರು ರಕ್ತಾಭಿಷೇಕ ಮಾಡಿದ್ದಾರೆ!

ಇದು ಸಿಎಂ ಮೇಲಿನ ಅಭಿಮಾನದಿಂದಲ್ಲ, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶದಿಂದ ನಡೆದ ರಕ್ತಾಭಿಷೇಕ.

ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವಂತೆ ಮಂಡ್ಯದಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. 50 ದಿನದಿಂದ ಧರಣಿ ನಡೆಸುತ್ತಿದ್ದರೂ ರೈತರ ಸಮಸ್ಯೆಗಳನ್ನು ಸರ್ಕಾರ ಆಲಿಸಿಲ್ಲ. ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ ರೈತರು, ಸರ್ಕಾರದ ನಡೆ ಖಂಡಿಸಿ ಇಂದು ವಿಭಿನ್ನ ಪ್ರತಿಭಟನೆ ನಡೆಸಿದರು.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ 30ಕ್ಕೂ ಹೆಚ್ಚು ರೈತರು, ಇಂಜಕ್ಷನ್ ಟ್ಯೂಬ್​ ಮೂಲಕ ತಮ್ಮ ದೇಹಗಳಿಂದ ರಕ್ತ ತೆಗೆದು ಸಿಎಂ ಪ್ರತಿಮೆ ಇಟ್ಟು ಅಭಿಷೇಕ ಮಾಡಿದರು. ರಕ್ತಾಭಿಷೇಕ ಮಾಡಿದ ರೈತರನ್ನ ಬಂಧಿಸಿದ ಪೊಲೀಸರು, ಪುತ್ಥಳಿಯನ್ನೂ ವಶಕ್ಕೆ ಪಡೆದ ಘಟನೆ ಬುಧವಾರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net