ಮೆಟ್ರೋದಲ್ಲಿ ಪ್ರಯಾಣ ಮಾಡಿದ ಕಿಚ್ಚ ಸುದೀಪ್ ಆ್ಯಂಡ್ ಟೀಂ! Sudeep Rides Metro After CCL Match Win

sudeep
Published on

ಬೆಂಗಳೂರು:  ( Sudeep Rides Metro After CCL Match Win) ಕಿಚ್ಚ ಸುದೀಪ್ ಅವರು ಸದ್ಯ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್​’ನಲ್ಲಿ (ಸಿಸಿಎಲ್​) ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಮೊದಲ ಪಂದ್ಯವನ್ನು ಗೆದ್ದಿದ್ದು, ಎರಡನೇ ಪಂದ್ಯವನ್ನಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.  ಮುಂದಿನ ಮ್ಯಾಚ್​​  ಪ್ರ್ಯಾಕ್ಟಿಸ್ ಮುಗಿಸಿ  ಸುದೀಪ್ ಅವರು  ಮೆಟ್ರೋದಲ್ಲಿ ಸಂಚಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಫೆಬ್ರವರಿ 15 ಅಂದರೆ ಶನಿವಾರ ಕರ್ನಾಟಕ ಬುಲ್ಡೋಜರ್ಸ್ ತಂಡ ಮುಂಬೈ ಹೀರೋಸ್​ನ ಎದುರಿಸಲಿದೆ. ಹೈದರಾಬಾದ್​ನಲ್ಲಿ ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದೆ.

 ಪಂದ್ಯದ ಸಿದ್ಧತೆಗಾಗಿ ಕರ್ನಾಟಕ ತಂಡದವರು ಹೈದರಾಬಾದ್​ನಲ್ಲಿ ಇದ್ದು ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಪ್ರ್ಯಾಕ್ಟಿಸ್ ಮುಗಿಸಿ ಐಷಾರಾಮಿ ಕಾರು ಬಳಸುವ ಬದಲು ಸುದೀಪ್ ಮೆಟ್ರೋದಲ್ಲಿ ಸಂಚಾರ ಮಾಡಿದ್ದಾರೆ.

ಸುದೀಪ್ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುದೀಪ್ ಸರಳತೆಗೆ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋಗಳನ್ನು ಸಾಕಷ್ಟು ವೈರಲ್ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net