

ಮಹರಾಷ್ಟ್ರ: (people facing sudden hair fall ) ಮಹಾರಾಷ್ಟ್ರದ ಒಂದು ಪ್ರದೇಶದ ಗ್ರಾಮಸ್ಥರು ನಿಗೂಢವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೂದಲು ಉದುರಲು ಶುರುವಾದ್ರೆ 3 ದಿನದಲ್ಲಿ ತಲೆ ಬೋಳಾಗುತ್ತದೆ. ಮಹಾರಾಷ್ಟ್ರದ ಶೆಗಾಂವ್ ಪುಲ್ತಾನಾದಲ್ಲಿ ನಿಗೂಢವಾಗಿ ಸಾಕಷ್ಟು ಕೂದಲು ಉದುರಿದ ಪರಿಣಾಮ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.
ಮಹಾರಾಷ್ಟ್ರದ ಶೇಗಾಂವ್ ಪುಲ್ತಾನದಲ್ಲಿ ಒಂದು ರೋಗ ಹರಡಿದೆ. ಮೂರೇ ದಿನದಲ್ಲಿ ತಲೆಯ ಮೇಲಿನ ಕೂದಲೆಲ್ಲಾ ಉದುರುವುದರಿಂದ ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಶೇಗಾಂವ ತಾಲೂಕಿನ ಬಂಡಗಾಂವ, ಕಲವಾಡ, ಹಿಂಗಾಣ ಗ್ರಾಮಗಳಲ್ಲಿ ವೈರಸ್ ಹರಡಿದ್ದು, ಸಮಸ್ಯೆ ಉಂಟಾಗಿದೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ,ಶೇಗಾಂವ್ ನ ಹಲವು ಗ್ರಾಮಗಳಲ್ಲಿ ಈ ನಿಗೂಢ ರೋಗ ಹರಡುತ್ತಿದೆ. ಈ ವೈರಸ್‌ನಿಂದಾಗಿ ಇಲ್ಲಿ ಅನೇಕ ಜನರು ಕೂದಲು ಉದುರುವಿಕೆಯನ್ನು ಅನುಭವಿಸುತ್ತಿದ್ದಾರೆ. ಮೊದಲು ನೆತ್ತಿಯಲ್ಲಿ ತುರಿಕೆ, ನಂತರ ಕೂದಲು ಉದುರುವುದು, ಮತ್ತು ಮೂರನೇ ದಿನದಲ್ಲಿ ಎಲ್ಲಾ ಕೂದಲು ಉದುರಿಹೋಗುತ್ತದೆ. ಪುರುಷರು ಮತ್ತು ಮಹಿಳೆಯರು ತಮ್ಮ ಕೂದಲನ್ನು ಕಳೆದುಕೊಂಡಿದ್ದಾರೆ. ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಹಲವರು ಖಾಸಗಿ ಕ್ಲಿನಿಕ್‌ಗಳ ಮೊರೆ ಹೋಗುತ್ತಾರೆ.
ಕೆಲ ಸ್ಥಳೀಯ ರಾಜಕೀಯ ವ್ಯಕ್ತಿಗಳು ಈ ವಿಚಾರವನ್ನು ಸರ್ಕಾರದ ಗಮನಕ್ಕೂ ತಂದಿದ್ದಾರೆ. ಸ್ಥಳೀಯ ಗಾಳಿಯಲ್ಲಿನ ಯಾವುದೇ ರಾಸಾಯನಿಕ ಬದಲಾವಣೆಗಳು ಅಥವಾ ಸ್ಥಳೀಯ ನೀರಿನಲ್ಲಿ ರಾಸಾಯನಿಕ ಬದಲಾವಣೆಗಳು ಈ ಸಮಸ್ಯೆಗೆ ಕಾರಣವಾಗಬಹುದು ಎಂದು ಆರಂಭದಲ್ಲಿ ಹೇಳಲಾಗುತ್ತದೆ. ಸದ್ಯ ಈ ಪ್ರದೇಶದ ಆರೋಗ್ಯ ಇಲಾಖೆ ಅಧ್ಯಯನದಲ್ಲಿ ತೊಡಗಿದೆ.
ಈ ಕಾಯಿಲೆ ಇದ್ದಕ್ಕಿದ್ದ ಹಾಗೆ ಮೂರೇ ದಿನಗಳಲ್ಲಿ ಬೋಳಾಗುತ್ತಿರುವುದು ಆಘಾತಕಾರಿ. ಸರ್ಕಾರ ಹೊಸ ಕ್ರಮಗಳನ್ನು ಕೈಗೊಂಡು ಇದಕ್ಕೆ ಕಾರಣವನ್ನು ಕಂಡುಹಿಡಿಯಬೇಕು ಎಂದು ಅನೇಕರು ಹೇಳಿದರು.