ಬೆತ್ತಲೇ ಪಾರ್ಟಿಯಲ್ಲಿ ಪಾಲ್ಗೊಂಡ ನಟಿ; ಆ ಅನುಭವ ಬಿಚ್ಚಿಟ್ಟಳು...

Suchitra Krishnamoorthi
Published on

ಬೆಂಗಳೂರು:  ನಟಿ ಸುಚಿತ್ರಾ ಕೃಷ್ಣಮೂರ್ತಿ ಹಿಂದಿ, ದಕ್ಷಿಣ ಸಿನಿಮಾಗಳು ಮತ್ತು ದೂರದರ್ಶನದಲ್ಲಿ ತಮ್ಮ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ನಟಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.  ಜುಲೈ 14  ಬರ್ಲಿನ್‌ನಲ್ಲಿ ಆಯೋಜಿಸಿದ್ದ ಬೆತ್ತಲೆ ಪಾರ್ಟಿಯಲ್ಲಿ ಭಾಗವಹಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಒಂದು​​ ಪೋಸ್ಟ್ ಸಖತ್​​ ವೈರಲ್​ ಆಗಿದೆ.

ಬರ್ಲಿನ್‌ನಲ್ಲಿ ಆಯೋಜನೆಗೊಳ್ಳುವ ಜನಪ್ರಿಯ ಬೆತ್ತಲೇ ಪಾರ್ಟಿಯಲ್ಲಿ ಹಲವು ಸೆಲೆಬ್ರೆಟಿಗಳು, ಗಣ್ಯರು ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಯೂರೋಪ್ ಪ್ರವಾಸದಲ್ಲಿದ್ದ ನಟಿ ಸುಚಿತ್ರ ಕೃಷ್ಣಮೂರ್ತಿ ಈ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಪಾರ್ಟಿಯ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಚ್ಚಿಟ್ಟಿದ್ದಾರೆ.

ಬರ್ಲಿನ್‌ನಲ್ಲಿ ಆಯೋಜನೆಗೊಳ್ಳುವ ನೇಕೆಡ್ ಅಥವಾ ಪಾಸಿಟಿವಿಟಿ ಪಾರ್ಟಿಯಲ್ಲಿ ಪಾಲ್ಗೊಂಡೆ. ಆದರೆ ಪಾರ್ಟಿಗೆ ಹೋದ ನನಗೆ ಜನಪ್ರಿಯ ಸಂದೇಶವೊಂದು ನೆನಪಾಗಿತ್ತು. ಅದೇನೆಂದರೆ ನಿಮ್ಮ ಮೆದುಳು ಕಾರ್ಯನಿರ್ವಹಿಸದಷ್ಟು ಒಪನ್ ಮೈಂಡೆಡ್ ಆಗಿರಬೇಡಿ. ನಾನು ದೇಸಿ ಹುಡುಗಿ ಎಂದೆಂದಿಗೂ. ನನಗೆ ಸ್ನಾನ ಹಾಗೂ ಗಾಯತ್ರಿ ಮಂತ್ರ ಪಠಣ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬರ್ಲಿನ್‌ನಲ್ಲಿ ಈ ನೇಕೆಡ್ ಪಾರ್ಟಿ ಸಾಮಾನ್ಯ. ಈ ಪಾರ್ಟಿಯ ಪ್ರಮುಖ ಉದ್ದೇಶ ಎಂದರೆ ಬಾಡಿ ಪಾಸಿಟಿವಿಟಿ. ಹೀಗಾಗಿ ಸರಿ ನೋಡಿ ಬೀಡೋಣ ಎಂದು ತೆರಳಿದ್ದೆ. ಈ ಪಾರ್ಟಿ ನನ್ನ ಆತ್ಮೀಯ ಗೆಳೆಯೊರೊಬ್ಬರ ಪರಿಚಸ್ಥರ ಬಾರಿನಲ್ಲಿ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಅತಿಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಹಾಕಲಾಗಿತ್ತು. ಆದರೆ ಪಾರ್ಟಿ ಒಳ ಹೊಕ್ಕಾಗ ನನಗೆ ಅಷ್ಟೇ ವೇಗದಲ್ಲಿ ವಾಪಸ್ ಬರುವ ಮನಸ್ಸಾಗಿದೆ. ನನಗೆ ಇತರರ ಖಾಸಗಿ ಅಂಗ ನೋಡಬೇಕಾಗಿಲ್ಲ ಎಂದು ನಟಿ ಸುಚಿತ್ರ ಹೇಳಿಕೊಂಡಿದ್ದಾರೆ. ಈ ಪೋಸ್ಟ್​​ನ ನಟಿ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net