

ಬೆಂಗಳೂರು: ಸ್ಟಾರ್ಟ್‌ಅಪ್ ಕಂಪನಿಯೊಂದರ 39 ವರ್ಷದ ಮಹಿಳಾ ಸಿಇಒ ಸುಚನಾ ಗೋವಾದಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ನಂತರ ದೇಹವನ್ನು ನೆರೆಯ ರಾಜ್ಯವಾದ ಕರ್ನಾಟಕಕ್ಕೆ ಕೊಂಡೊಯ್ದಿದ್ದಾಳೆ. ಆರೋಪಿ ಸುಚನಾ ಸೇಠ್‌ನನ್ನು ಭಾನುವಾರ ರಾತ್ರಿ ಕರ್ನಾಟಕದ ಚಿತ್ರದುರ್ಗದಿಂದ ಗೋವಾ ಪೊಲೀಸರು ಬಂಧಿಸಿದ್ದಾರೆ.
ಆನ್‌ಲೈನ್ ಪ್ಲಾಟ್‌ಫಾರ್ಮ್ 'ಲಿಂಕ್ಡ್‌ಇನ್' ನಲ್ಲಿ ಸೇಥ್ ಅವರ ಪೇಜ್ ಪ್ರಕಾರ, ಸುಚನಾ ಸ್ಟಾರ್ಟ್-ಅಪ್ ಕಂಪನಿ 'ಮೈಂಡ್‌ಫುಲ್ ಎಐ ಲ್ಯಾಬ್' ನ ಸಿಇಒ ಆಗಿದ್ದಾರೆ ಮತ್ತು 2021 ರ 'ಎಐ ಎಥಿಕ್ಸ್' ನಲ್ಲಿನ ಟಾಪ್ 100 ಪ್ರತಿಭಾವಂತ ಮಹಿಳೆಯರಲ್ಲಿ ಒಬ್ಬರು.
ಸುಚನಾ ನಾಲ್ಕು ವರ್ಷದ ಅಮಾಯಕ ಮಗನನ್ನು ಕೊಂದ ಹಿಂದಿನ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ತಾನು ಪತಿಯಿಂದ ಬೇರ್ಪಟ್ಟಿದ್ದೇನೆ ಮತ್ತು ಪ್ರಸ್ತುತ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಸುಚನಾ ಸೇಠ್ ಪೊಲೀಸರಿಗೆ ತಿಳಿಸಿದ್ದಾರೆ.
ಸುಚನಾ ಸೇಠ್ ಸ್ಟಾರ್ಟ್ ಅಪ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ). 4 ವರ್ಷದ ಮಗನೊಂದಿಗೆ ಗೋವಾದ ಹೊಟೇಲ್‌ನಲ್ಲಿ ತಂಗಿದ್ದ ಆಕೆ ತನ್ನ ಮಗುವನ್ನು ಹರಿತವಾದ ಆಯುಧದಿಂದ ಕೊಂದಿದ್ದಾಳೆ. ಸೂಚನಾ ಅವರನ್ನು ಕರ್ನಾಟಕದಲ್ಲಿ ಬಂಧಿಸಲಾಗಿದೆ, ಆದರೆ ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.
ಮಹಿಳೆಯನ್ನು ಗೋವಾಕ್ಕೆ ಮರಳಿ ಕರೆತರಲಾಗಿರುವುದರಿಂದ ಬಂಧನದ ನಂತರ ಇನ್ನೂ ವಿಚಾರಣೆ ನಡೆಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ(39) ಗೋವಾದಲ್ಲಿ ತನ್ನ ಮಗನನ್ನು ಕೊಲೆ ಮಾಡಿ, ದೇಹವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಕರ್ನಾಟಕಕ್ಕೆ ಮರಳಿದ್ದಳು. ಗೋವಾ ಪೊಲೀಸರು ಭಾನುವಾರ (ಜನವರಿ 7) ರಾತ್ರಿ ಕರ್ನಾಟಕದ ಚಿತ್ರದುರ್ಗದಿಂದ ಸುಚನಾ ಅವರನ್ನು ಬಂಧಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಲ್ಸನ್ ಘಟನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಗೋವಾ ಪೊಲೀಸ್ ತಂಡವು ಪ್ರಸ್ತುತ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿದೆ ಎಂದು ಅವರು ಹೇಳಿದರು. ಆರೋಪಿ ಸೂಚನಾ ಅವರನ್ನು ಬಂಧಿಸಲಾಗಿದ್ದು, ಗೋವಾಕ್ಕೆ ಮರಳಿದ್ದಾರೆ.