ಇಂತಹ ಚರ್ಚೆಗಳು ಸಿನಿಮಾವನ್ನು ಕೊಲ್ಲುತ್ತವೆ; ಅಭಿಮಾನಿಗಳಿಗೆ 'ಪವನ್‌ ಕಲ್ಯಾಣ್‌' ಹೀಗೆ ಹೇಳಿದ್ಯಾಕೆ? pawan kalyan

pawan
Published on

ಹೈದರಾಬಾದ್‌; ನಟ ಪವನ್ ಕಲ್ಯಾಣ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಮಾನಿಗಳು ಸೋಶಿಯಲ್​ ಮೀಡಿಯಾ ವಾರ್​ನಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿನ ಇಲ್ಲ-ಸಲ್ಲದ ಚರ್ಚೆಗಳು ಸಿನಿಮಾವನ್ನು ಕೊಲ್ಲುತ್ತವೆ ಹಾಗಾಗಿ ಅಂತಹ ಸಂಘರ್ಷಗಳನ್ನು ತಪ್ಪಿಸಬೇಕು ಎಂದು ಪವನ್​ ಮನವಿ ಮಾಡಿದ್ದಾರೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಇತ್ತೀಚಿನ ಹಿಟ್ 'ದಿ ಕಾಲ್ ಹಿಮ್ ಒಜಿ' ಯಶಸ್ಸಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಇನ್ನೂ ಸಿನಿಮಾದ ಇಡೀ ತಂಡ ಕಾರ್ಯಕ್ರಮದಲ್ಲಿ ಹಾಜರಿತ್ತು. ಈ ಸಮಯದಲ್ಲಿ ನಟ ವಿವಿಧ ವಿಷಯಗಳನ್ನು ಒಳಗೊಂಡಂತೆ ಸುಮಾರು ಒಂದು ಗಂಟೆಗಳ ಕಾಲ ಭಾಷಣ ಮಾಡಿದರು. ಸಾಮಾಜಿಕ ಮಾಧ್ಯಮದಲ್ಲಿ, ಅಭಿಮಾನಿಗಳು ಸಾಮಾನ್ಯವಾಗಿ ಪರಸ್ಪರ ಮತ್ತು ತಮ್ಮ ನೆಚ್ಚಿನ ನಾಯಕರನ್ನು ಚಿತ್ರದ ಯಶಸ್ಸು ಅಥವಾ ವೈಫಲ್ಯಕ್ಕೆ ದೂಷಿಸುತ್ತಾರೆ. ಆದರೆ ತೆರೆಮರೆಯ ಹೋರಾಟಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ಗಮನಿಸಿದರು.

ಪವನ್​ ಕಲ್ಯಾಣ್​ ಹೇಳಿದ್ದೇನು?

ಏನಾಗುತ್ತಿದೆ ಅಂತ ನಿಮಗೆ ಗೊತ್ತಿಲ್ಲ. ಅನೇಕ ಜನರು ತಮ್ಮ ಕುಟುಂಬಗಳಿಂದ ದೂರವಾಗಿದ್ದಾರೆ. ಒಜಿ ಸಿನಿಮಾ ನಿರ್ದೇಶಕ ಸುಜೀತ್ ತನ್ನ ಹೆಂಡತಿ ಮತ್ತು ಮಗುವನ್ನು ಒಂದೂವರೆ ತಿಂಗಳಿನಿಂದ ನೋಡಿರಲಿಲ್ಲ. ಎಲ್ಲರೂ ಎದುರಿಸುವ ತೊಂದರೆಗಳನ್ನು ತಿಳಿಯದೆ ನೀವು ಸೋಶಿಯಲ್​ ಮೀಡಿಯಾ ವಾರ್​ನಲ್ಲಿ ತೊಡಗಿದ್ದೀರಿ. ನನ್ನ ಅಭಿಮಾನಿಗಳು ಮತ್ತು ಇತರ ನಾಯಕರ ಅಭಿಮಾನಿಗಳು ಇಂತಹ ವಿಷಯಗಳನ್ನು ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ. ನಾವು ಈ ಹಿಂದೆ 100 ದಿನಗಳ ಸಿನಿಮಾಗಳನ್ನು ಆಚರಿಸಿದ ದಿನಗಳು ಇದ್ದವು. ಆದರೆ ಈಗ ಒಂದು ಚಿತ್ರದ ಜೀವಿತಾವಧಿ ಕೇವಲ ಆರು ದಿನಗಳು ಆಗಿದೆ. ದಯವಿಟ್ಟು ಯಾರೂ ಕೂಡ ಸಿನಿಮಾವನ್ನು ಕೊಲ್ಲಬೇಡಿ, ಪರಸ್ಪರ ಪ್ರೀತಿಸಿ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

(ಏಜೆನ್ಸೀಸ್)

ಪವನ್‌ ಕಲ್ಯಾಣ್‌ ಹಾಗೂ ಇಮ್ರಾನ್ ಹಶ್ಮಿ ನಟನೆಯ ‘ಒಜಿ’ ಸಿನಿಮಾ ಬಿಡುಗಡೆ ಕಂಡಿದೆ. ಈ ಸಿನಿಮಾದಲ್ಲಿ ಪ್ರಕಾಶ್ ರಾಜ್, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್ ಮತ್ತು ಶ್ರೀಯಾ ರೆಡ್ಡಿಯಂತಹ ಪ್ರಮುಖ ತಾರಾಬಳಗವಿದೆ. ಸುಜೀತ್ ನಿರ್ದೇಶನದ ಈ ಚಿತ್ರವನ್ನು ಡಿವಿವಿ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಡಿವಿವಿ ದಾನಯ್ಯ ಮತ್ತು ಕಲ್ಯಾಣ್ ದಾಸರಿ ನಿರ್ಮಿಸಿದ್ದಾರೆ. ಸೆಪ್ಟೆಂಬರ್ 25 ರಂದು ಬಿಡುಗಡೆಯಾದ ಈ ಚಿತ್ರವು 70 ಕೋಟಿ ರೂ.ಗಳೊಂದಿಗೆ ಭರ್ಜರಿಯಾಗಿ ತೆರೆಕಂಡಿದ್ದು, 2025 ರ ಅತಿದೊಡ್ಡ ಓಪನರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿತು. ಈ ಚಿತ್ರವು ಇಲ್ಲಿಯವರೆಗೆ 150 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net