Success Story| ಐಐಎಂನಿಂದ ಯುಪಿಎಸ್‌ಸಿ ಕನಸಿನೆಡೆಗೆ; ಎರಡು ಬಾರಿ ಸಿಎಸ್‌ಸಿ ಅರ್ಹತೆ ಗಳಿಸಿದ ಅಭಿಷೇಕ್

KH Abhishek
Published on

ದೇಶದ ಪ್ರತಿಷ್ಠಿತ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ, ಇದಕ್ಕೂ ಮುನ್ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ, ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಲ್ಲೂ ಸೇವೆ. ಇದರ ಹೊತಾಗಿಯೂ ಅವರ ಸೆಳೆತವಿದ್ದದ್ದು ಇಂಡಿಯನ್ ಆಡ್ಮಿನಿಸ್ಟ್ರೇಷನ್ ಬಗ್ಗೆ. ಹೀಗಾಗಿ ಯುಪಿಎಸ್‌ಸಿ ಪರೀಕ್ಷೆ ನಿರ್ಧರಿಸಿ ಎರಡು ಬಾರಿ ಯಶಸ್ಸು ಗಳಿಸಿದವರು ಕೆ.ಎಚ್.ಅಭಿಷೇಕ್. ಸದ್ಯ ಇಂಡಿಯನ್ ರೆವೆನ್ಯೂ ಸರ್ವೀಸ್ ಅಧಿಕಾರಿ. ಉನ್ನತ ಹುದ್ದೆಗಾಗಿನ ಅವರ ಪಯಣ, ಅಧ್ಯಯನ, ಯಶಸ್ಸುಗಳನ್ನು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಸಂಡೇ ಗೆಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಧುರಾ ಭಟ್ಟ ಬೆಂಗಳೂರು
ವಿದ್ಯಾರ್ಥಿ ದೆಸೆಯಿಂದಲೂ ಟಾಪರ್‌ಗಳ ಸಾಲಿನಲ್ಲಿರುತ್ತಿದ್ದವರು ಕೆ.ಎಚ್. ಅಭಿಷೇಕ್ ಉನ್ನತ ವ್ಯಾಸಂಗದವೆರೆಗೂ ಇದನ್ನು ಬಿಟ್ಟುಕೊಡಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯಲ್ಲೂ ಯಶಸ್ಸು ಸಾಧಿಸಿ ಮಾದರಿಯಾಗಿದ್ದಾರೆ. 10ನೇ ತರಗತಿ ಓದುವಾಗ ಎಕ್ಸಲೆನ್ಸ್ ಪ್ರಶಸ್ತಿ, ಪಿಯುಸಿಯಲ್ಲಿ ಪಿಯು ಎಕ್ಸಲೆನ್ಸ್ ಗೌರವ, ಕಾಲೇಜ್ ಕಲಿಯುತ್ತಿದ್ದಾಗ ಬೆಸ್ಟ್ ಔಟ್‌ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿಯನ್ನು ಪಡೆದುಕೊಳ್ಳುವುದರ ಮೂಲಕ ಎಲ್ಲರಿಗೂ ಮಾದರಿಯಾಗಿದ್ದ ಇವರು ಎರಡು ವರ್ಷಗಳ ಕಾಲ ಅಮೆರಿಕನ್ ಕಂಪನಿಯಲ್ಲಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನಲ್ಲಿ ವಿವಿಧ ಹುದ್ದೆಯಲ್ಲಿದ್ದರು. ನಂತರ ಸಿವಿಲ್ ಸರ್ವೀಸ್ ಹುದ್ದೆ ಆಕಾಂಕ್ಷಿಯಾಗಿ ಪರೀಕ್ಷೆ ಬರೆಯಲು ನಿರ್ಧರಿಸಿದರು.

ಎರಡು ಬಾರಿ ಯುಪಿಎಸ್​ಸಿ ಪಾಸ್

2020 ಮತ್ತು 2021ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರೂ ಲ ನೀಡಿರಲಿಲ್ಲ. 2022ರಲ್ಲಿ 3ನೇ ಪ್ರಯತ್ನದಲ್ಲಿ 813ನೇ ರ‌್ಯಾಂಕ್ ಪಡೆದು, ಇಂಡಿಯನ್ ರೆವೆನ್ಯೂ ಸರ್ವೀಸ್ ಹುದ್ದೆಗೆ ಆಯ್ಕೆಯಾದರು. ಆದರೆ, ಉನ್ನತ ಹುದ್ದೆಯ ಗುರಿಯೊಂದಿಗೆ 2023ರಲ್ಲಿ ನಾಲ್ಕನೇ ಬಾರಿ ಮತ್ತೆ ಪರೀಕ್ಷೆ ಬರೆದು ಅರ್ಹತೆ ಗಳಿಸಿದರೂ, ನಿರೀಕ್ಷಿತ ರ‌್ಯಾಂಕ್ ದೊರೆಯಲಿಲ್ಲ ಎಂಬುದು ಇವರ ಕೊರಗು.

ಪರೀಕ್ಷಾ ತಯಾರಿ ಹೀಗಿರಲಿ

ಕೋಚಿಂಗ್ ತೆಗೆದುಕೊಳ್ಳುವುದು ಸಮಯ ಉಳಿತಾಯ ಮಾಡುವ ದೃಷ್ಟಿಯಿಂದ ಒಳ್ಳೆಯದು. ಕಷ್ಟದ ವಿಷಯಗಳನ್ನು ನಾವೇ ಓದುತ್ತಾ ಕುಳಿತರೆ ಸಮಯ ವ್ಯರ್ಥವಾಗುತ್ತದೆ. ಪರೀಕ್ಷೆಯ ತಯಾರಿ ಸಿಲೆಬಸ್ ಪ್ರಕಾರ ವಿಷಯವನ್ನು ಓದುತ್ತ ಹೋಗುವುದರಿಂದ ಆರಂಭಿಸಬೇಕು. ಪ್ರತಿವಾರದ ಕೊನೆಯಲ್ಲಿ ಆ ವಾರದಲ್ಲಿ ಓದಿರುವ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮನ್ನು ನಾವೇ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು. ಮುಖ್ಯವಾಗಿ ಸಾಮಾನ್ಯ ಜ್ಞಾನ ಪರೀಕ್ಷೆಗೆಂದೇ ನೋಟ್ಸ್ ಮಾಡಿಕೊಳ್ಳಬೇಕು. ಎಷ್ಟು ಗಂಟೆ ಓದುತ್ತೀವಿ ಎನ್ನುವುದಕ್ಕಿಂತ ಓದಿರುವುದನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಎನ್ನುವುದು ಮುಖ್ಯ. ಓದಲು ಕುಳಿತ ನಂತರ ನಮ್ಮ ಸಂಪೂರ್ಣ ಗಮನ ಓದುವುದರ ಮೇಲೆಯೇ ಇರುವಂತೆ ನೋಡಿಕೊಳ್ಳಬೇಕು.

ಟೆನ್ನಿಸ್ ಬಗ್ಗೆ ಪ್ರಶ್ನೆಗಳು

ಯುಪಿಎಸ್‌ಸಿಗೆ ನಾವು ಸಲ್ಲಿಸುವ ಡೀಟೇಲ್ಡ್ ಅಪ್ಲಿಕೇಷನ್ ಾರ್ಮ್‌ನಲ್ಲಿ ನಮ್ಮ ವ್ಯಕ್ತಿತ್ವದ ಸಂಪೂರ್ಣ ಪರಿಚಯ ನೀಡುತ್ತದೆ. ಇದನ್ನು ಆಧರಿಸಿಯೇ ಸಂದರ್ಶಕರು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ತಕ್ಕಂತೆ ತಯಾರಿ ನಡೆಸಿಕೊಂಡು ಹೋಗಿರಬೇಕು. ನನ್ನ ಹವ್ಯಾಸ ಟೆನ್ನಿಸ್ ಎಂದು ಬರೆದಿದ್ದಕ್ಕೆ ಅದರ ಬಗ್ಗೆಯೇ ಪ್ರಶ್ನೆ ಕೇಳಿದ್ದರು. ಇದರ ಜತೆ ದೇಶ ಮತ್ತು ವಿದೇಶಗಳ ನಡುವಿನ ಸಂಬಂಧ, ಕೋವಿಡ್ ಬಗ್ಗೆ ಪ್ರಶ್ನೆ ಕೇಳಿದ್ದರು. ಸಂದರ್ಶನದಲ್ಲಿ ಅವರು ಕೇಳುವ ಪ್ರಶ್ನೆಗೆ ಸ್ಪಷ್ಟ ಹಾಗೂ ಸರಳವಾಗಿ ಉತ್ತರಿಸುವುದನ್ನು ರೂಢಿಸಿಕೊಂಡರೆ ಸಹಾಯವಾಗಲಿದೆ. ಇದಕ್ಕಾಗಿ ಮಾದರಿ ಸಂದರ್ಶನಗಳನ್ನು ಎದುರಿಸಿ ಸಿದ್ಧತೆ ಮಾಡಿಕೊಳ್ಳಬಹುದು.

KH Abhishek

ಕರಾವಳಿಯಿಂದ ಬಯಲುನಾಡಿನವರೆಗೆ

ಮಂಗಳೂರಿನವರಾದರೂ ಪ್ರಾಥಮಿಕ ಶಿಕ್ಷಣವನ್ನು ರಾಯಚೂರಿನ ಕರ್ನಾಟಕ ವೆಲ್‌ೇರ್ ಟ್ರಸ್ಟ್‌ನ ಶಾಲೆಯಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಕೊಡಗಿನ ವಿರಾಜಪೇಟೆಯ ಕಾವೇರಿ ಸ್ಕೂಲ್‌ನಲ್ಲಿ, ಪಿಯುಸಿಯನ್ನು ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಕೊನೆಗೆ ಇಂಜಿನಿಯರಿಂಗ್‌ಗಾಗಿ ಮಂಗಳೂರಿನ ಸುರತ್ಕಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಕರ್ನಾಟಕ ಸೇರಿಕೊಂಡರು. ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಲ್ಲದೆ, ಬೆಂಗಳೂರಿನ ಪ್ರತಿಷ್ಠಿತ ಐಐಎಂನಲ್ಲಿ ಎಂಬಿಎ ಪದವಿಯನ್ನು ಗಳಿಸಿದ್ದಾರೆ.

ಆರಂಭದಿಂದಲೇ ಶಿಸ್ತು ಅಗತ್ಯ

ಪರೀಕ್ಷೆ ಬರೆಯಬೇಕು ಎಂದು ನಿರ್ಧರಿಸಿದ ದಿನದಿಂದಲೇ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಮೊದಲ ಪ್ರಯತ್ನದಲ್ಲಿಯೇ ಯಶಸ್ಸಿನ ಗುರಿ ಹೊಂದಬೇಕು. ಪರೀಕ್ಷೆ ಹೇಗಿರುತ್ತದೆ ಎಂದು ತಿಳಿಯಲು ಒಮ್ಮೆ, ಅಧ್ಯಯನಕ್ಕಾಗಿ ಮತ್ತೊಮ್ಮೆ ಪ್ರಯತ್ನ ಎಂಬೆಲ್ಲ ಯೋಚನೆಗಳು ನಮ್ಮ ತಲೆಯಲ್ಲಿದ್ದರೆ ಅಷ್ಟರಮಟ್ಟಿಗೆ ನಾವು ವಿಚಚಲಿತರಾಗಿದ್ದೇವೆ ಎಂದೇ ಅರ್ಥ. ದೀರ್ಘಾವಧಿಯನ್ನು ಬಯಸುವ ಪರೀಕ್ಷೆ ಇದಾಗಿರುವುದರಿಂದ ಪರೀಕ್ಷೆ ಹೊರತಾಗಿಯೂ ಮುಂದಿನ ಯೋಜನೆ ನಮ್ಮಲ್ಲಿರಬೇಕು. ಪೂರಕವಾಗಿ ಅಥವಾ ಮತ್ತೊಂದು ಅವಕಾಶಕ್ಕೂ ದಾರಿ ಮಾಡಿಕೊಂಡಿದ್ದರೆ ಉತ್ತಮ.

ಮಾರ್ಗದರ್ಶನ ಪಡೆಯಿರಿ

ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕು ಎಂದರೆ ನಮಗೆ ಮಾರ್ಗದರ್ಶನ ನೀಡಲು ಒಬ್ಬ ಗುರು ಇರಲೇಬೇಕು. ತಯಾರಿ ನಡೆಸುವ ಸಮಯದಲ್ಲಿ ನಮಗೆ ಯಾವುದೇ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಲು, ನಾವು ತಯಾರಿಯನ್ನು ಎಲ್ಲಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು, ಯಾವುದು ಮುಖ್ಯ? ಯಾವುದು ಮುಖ್ಯವಲ್ಲ ಎಂದು ತಿಳಿಯಲು ಈ ಹಿಂದೆ ಪರೀಕ್ಷೆ ಬರೆದವರ, ತಿಳಿದವರ ಮಾರ್ಗದರ್ಶನ ಪಡೆದರೆ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ತಿಳಿದು ಗಮನ ಕೇಂದ್ರೀಕರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net