ಸಮಯಪ್ರಜ್ಞೆ, ತಾಳ್ಮೆ ಯಿಂದ ಕಾರ್ಯದಲ್ಲಿ ಯಶಸ್ಸು

23bhr 3
ಬಾಳೆಹೊನ್ನೂರಿನ ಲಯನ್ಸ್ ಕ್ಲಬ್ ಆಯೋಜಿಸಿದ್ದ ನಾಯಕತ್ವ ಬೆಳವಣಿಗೆ, ಭಾಷಣ ಕಲೆ ತರಬೇತಿಯಲ್ಲಿ ತರಬೇತುದಾರ ಡಾ.ನವೀನ್ ಮಿಸ್ಕಿತ್, ಪ್ರಜ್ವಲ್ ಜೈನ್, ಎಂ.ಡಿ.ಶಿವರಾಮ್, ವಿಲಿಯಂ, ನಾರಾಯಣಶೆಟ್ಟಿ, ಸುಬ್ರಹ್ಮಣ್ಯ ಭಾಗವಹಿಸಿದ್ದರು.
Published on

ಬಾಳೆಹೊನ್ನೂರು: ಸಾರ್ವಜನಿಕ ಸಭೆಯಲ್ಲಿ ಜನ ಸಮೂಹದ ಎದುರಿಗೆ ತನ್ನ ವಿಚಾರಧಾರೆಯನ್ನು ಮಂಡಿಸುವುದೇ ಒಂದು ಅದ್ಭುತ ಭಾಷಣ ಕಲೆ ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಡಾ.ನವೀನ್ ಲಾಯ್ಡ ಮಿಸ್ಕಿತ್ ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಭಾಷಣ ಕಲೆ, ನಾಯಕತ್ವ ಬೆಳವಣಿಗೆ, ಪಾರ್ಲಿಮೆಂಟ್ ಪ್ರೊಸೀಜರ್, ಸಭಾ ನಡವಳಿ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ನಮ್ಮ ಭಾವನೆಗಳನ್ನು ಮತ್ತು ವಿಚಾರಗಳನ್ನು ಅಭಿವ್ಯಕ್ತಿಸುವ ಮಾಧ್ಯಮ ಭಾಷೆಯಾಗಿದೆ. ಭಾಷಣ ಮಾಡುವ ಮೊದಲು ನಾವು ಮಾತನಾಡಬೇಕಾದ ಅಂಶಗಳನ್ನು ಸರಿಯಾಗಿ ಹೊಂದಿಸಿಕೊಳ್ಳುವ ಅವಶ್ಯಕತೆಯಿದೆ. ಮಾತಿನ ದಾಟಿ ಬಹಳ ಸ್ಪಷ್ಟವಾಗಿರಬೇಕು. ದೂರದೃಷ್ಟಿ, ಆತ್ಮವಿಶ್ವಾಸ, ಕಾರ್ಯದಕ್ಷತೆ, ಸಮಯಪ್ರಜ್ಞೆ, ತಾಳ್ಮೆ ಇದ್ದಲ್ಲಿ ಒಬ್ಬ ಯಶಸ್ವಿ ನಾಯಕನಾಗಲು ಸಾಧ್ಯ ಎಂದರು.
ತರಬೇತುದಾರ ಪ್ರಜ್ವಲ್‌ಜೈನ್ ಮಾತನಾಡಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾರ್ಲಿಮೆಂಟ್ ಪ್ರೊಸೀಜರ್ ಹಾಗೂ ಸಭಾ ನಡವಳಿಕೆ ಬಗ್ಗೆ ಅಗತ್ಯವಾಗಿ ತಿಳಿದುಕೊಂಡಿರಬೇಕು ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಡಿ.ಶಿವರಾಮ್, ಕಾರ್ಯದರ್ಶಿ ವಿಲಿಯಂ ಡಯಾಸ್, ಖಜಾಂಚಿ ನಾರಾಯಣಶೆಟ್ಟಿ ತುಪ್ಪೂರು, ವಲಯಾಧ್ಯಕ್ಷ ಎನ್.ಸುಬ್ರಮಣ್ಯ, ಸದಸ್ಯರಾದ ಎಂ.ಎಸ್.ಪ್ರವೀಣ್, ಗ್ರೀಷ್ಮಾ, ಪ್ರಮೀಳಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net