ಕ್ರೀಡಾ ಕ್ಷೇತ್ರದಲ್ಲೂ ಯಶಸ್ಸು ಗಳಿಸಲು ಸಾಧ್ಯ

avt sports
ಆನವಟ್ಟಿಯ ಕೆಪಿಎಸ್ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸಚಿವ ಮಧು ಬಂಗಾರಪ್ಪ ಮತ್ತು ಕ್ರೀಡಾಪಟುಗಳು ಉದ್ಘಾಟಿಸಿದರು. ಮಂಜುಳಾ ಹೆಗಡಾಳ್, ಆರ್.ಪುಷ್ಪಾ, ಪ್ರೇಮ್‌ಕುಮಾರ್, ಸದಾನಂದ ಗೌಡ, ವೀರೇಶ್ ಕೊಟಗಿ, ಅಂಜಲಿ ಸಂಜೀವ್ ಇತರರಿದ್ದರು.
Published on

ಆನವಟ್ಟಿ: ಕ್ರೀಡಾಕೂಟದಿಂದ ಮಕ್ಕಳು ಮಾನಸಿಕ, ದೈಹಿಕವಾಗಿ ಸದೃಢರಾಗಲು ಸಾಧ್ಯ. ಕೇವಲ ವಿದ್ಯೆ ಮಾತ್ರವಲ್ಲದೆ, ಕ್ರೀಡೆಯಿಂದಲೂ ಸಹ ವಿಶ್ವದಾದ್ಯಂತ ಹೆಸರು ಮಾಡಿದವರು ಬಹಳ ಜನರಿದ್ದಾರೆ. ಅವರೆಲ್ಲರನ್ನೂ ಸ್ಫೂರ್ತಿಯಾಗಿಟ್ಟುಕೊಂಡು ಪಠ್ಯದ ಜತೆ ಕ್ರೀಡೆಗೂ ಮಹತ್ವ ನೀಡುವಲ್ಲಿ ಪಾಲಕರು ಗಮನ ಹರಿಸಬೇಕು ಎಂದು ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಆನವಟ್ಟಿಯ ಕೆಪಿಎಸ್ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 17ವರ್ಷದ ಒಳಗಿನ ಪ್ರೌಢಶಾಲಾ ಬಾಲಕ, ಬಾಲಕಿಯರ ವಾಲಿಬಾಲ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ನಾವು ಅಧಿಕಾರಕ್ಕೆ ಬಂದ ನಂತರ ಶೈಕ್ಷಣಿಕವಾಗಿ ವಿವಿಧ ಯೋಜನೆ ಜಾರಿಗೆ ತಂದಿದ್ದೇವೆ. ಮಕ್ಕಳ ಹಿತದಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಮರು ಪರೀಕ್ಷೆಗಳನ್ನು ಹೆಚ್ಚಿಸಿದ್ದೇವೆ. ಅನುತ್ತೀರ್ಣರಾಗುವ ಮಕ್ಕಳಿಗೆ ಮುಂದಿನ ತರಗತಿಗೆ ಹೋಗಲು ಇದರಿಂದ ಅವಕಾಶ ದೊರೆತಿದೆ. ಮಕ್ಕಳ ಪೌಷ್ಟಿಕತೆಗೆ ಒತ್ತು ನೀಡಲು ಸರ್ಕಾರ ಹಾಗೂ ಅಜೀಮ್ ಪ್ರೇಮ್ ಜೀ ೌಂಡೇಷನ್ ಸಹಯೋಗದಿಂದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ವಾರಕ್ಕೆ 6ದಿನ ಮೊಟ್ಟೆ ವಿತರಿಸಲಾಗುತ್ತಿದೆ ಎಂದರು.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ಅನೇಕ ಉತ್ತಮ ಕೊಡುಗೆಗಳು ದೊರಕುತ್ತಿವೆ. ಇದರಿಂದ ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತಿದೆ. ಪಾಲಕರು ಯಾವ ಕಾರಣಕ್ಕೂ ಶಾಲಾವಧಿಯಲ್ಲಿ ಮಕ್ಕಳಿಗೆ ರಜೆ ಹಾಕಿಸಬೇಡಿ. ಇದರಿಂದ ಮಕ್ಕಳಿಗೆ ಓದಿನ ಕಡೆ ನಿರಾಸಕ್ತಿ ಬೆಳೆಯುತ್ತದೆ ಎಂದರು.
ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಾಜ ಶುಂಠಿ ಅವರು ಶಾಲೆಗೆ ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮಷಿನ್ ಅನ್ನು ನೀಡುವುದಾಗಿ ತಿಳಿಸಿದರು.
ತಹಸೀಲ್ದಾರ್ ಮಂಜುಳಾ ಹೆಗಡಾಳ್, ಬಿಇಒ ಆರ್ ಪುಷ್ಪಾ, ಇಸಿಒ ಪ್ರೇಮ್‌ಕುಮಾರ್, ಸದಾನಂದ ಗೌಡ, ವೀರೇಶ್ ಕೊಟಗಿ, ಅಂಜಲಿ ಸಂಜೀವ್, ಕೆ.ಪಿ.ರುದ್ರಗೌಡ, ಚಂದ್ರಶೇಖರ್ ಪಾಟೀಲ್, ಡಾ. ಪ್ರದೀಪ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net