ಸಬ್ಸಿಡಿ ರಹಿತ ಅನಿಲ ಬೆಲೆ 140 ರೂ. ಏರಿಕೆ

gas cylindar
Published on

ನವದೆಹಲಿ: ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು ಹೊಸ ವರ್ಷದ ದಿನದಿಂದಲೇ ಜಾರಿಗೆ ಬರುವಂತೆ 140 ರೂಪಾಯಿ ಏರಿಕೆ ಮಾಡಲಾಗಿದೆ. ಇದು ಆಗಸ್ಟ್ ನಂತರ ಆಗಿರುವ ಭಾರಿ ಏರಿಕೆಯಾಗಿದೆ.

ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್ ಬೆಲೆ ಸತತ ಐದು ತಿಂಗಳಿಂದ ಏರಿಕೆ ಕಾಣುತ್ತಲೇ ಇದೆ. ಸರ್ಕಾರ ವರ್ಷಕ್ಕೆ ಒಟ್ಟು 12 ಸಿಲಿಂಡರ್​ಗಳನ್ನು (ತಲಾ 14.2 ಕೆಜಿ ತೂಕ) ಪ್ರತಿ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ಒದಗಿಸುತ್ತದೆ. ಅದಕ್ಕಿಂತ ಹೆಚ್ಚಿನ ಸಿಲಿಂಡರ್ ಬೇಕಾದಲ್ಲಿ ಮಾರುಕಟ್ಟೆ ದರದಲ್ಲಿ ಖರೀದಿಸಬಹುದು. ದೆಹಲಿ ಮತ್ತು ಮುಂಬೈನಲ್ಲಿ ಏರಿಕೆ ಪ್ರಮಾಣ ಅನುಕ್ರಮವಾಗಿ 19 ರೂ. ಹಾಗೂ 19.5 ರೂಪಾಯಿ ಆಗಿದೆ ಎಂದು ಇಂಡೇನ್ ಬ್ರಾಂಡ್​ನಲ್ಲಿ ಎಲ್​ಪಿಜಿ ಪೂರೈಸುವ ಭಾರತೀಯ ತೈಲ ನಿಗಮ (ಐಒಸಿ) ತಿಳಿಸಿದೆ. ದರ ಪರಿಷ್ಕರಣೆಯಿಂದ ದೆಹಲಿಯಲ್ಲಿ ಸಿಲಿಂಡರ್ ಬೆಲೆ 714 ರೂ. ಹಾಗೂ ಮುಂಬೈಯಲ್ಲಿ 684.50 ರೂ. ಆಗಿದೆ. ಕೋಲ್ಕತಾದಲ್ಲಿ ಸಬ್ಸಿಡಿಯೇತರ ಎಲ್​ಪಿಜಿ ಬೆಲೆ 21.5 ರೂ. ಏರಿಕೆಯಾಗಿದ್ದು ಸಿಲಿಂಡರ್ ಬೆಲೆ 747 ರೂ. ಹಾಗೂ ಚೆನ್ನೈನಲ್ಲಿ 20 ರೂ. ಹೆಚ್ಚಿದ್ದು ಸಿಲಿಂಡರ್ ದರ 734 ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net