ನೆರೆಗೆ ಮುಳುಗುತ್ತಿರುವ ಹಳ್ಳಿಗಳು: ಪ್ರತಿವರ್ಷ ಪ್ರವಾಹಪೀಡಿತ ಗ್ರಾಮಗಳ ಸಂಖ್ಯೆ ಹೆಚ್ಚಳ, ಹಾನಿ ನಿಯಂತ್ರಣಕ್ಕೆ ನವಸೂತ್ರ

1 page
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕಳೆದ ವರ್ಷವೆಲ್ಲ ಬರದಿಂದ ಕಂಗೆಟ್ಟಿದ್ದ ರಾಜ್ಯ ಈ ವರ್ಷ ನೆರೆಭೀತಿ ಎದುರಿಸುತ್ತಿದೆ. ಅದರಲ್ಲೂ ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾದ ವರ್ಷಗಳಲ್ಲಿ ಪ್ರವಾಹದಿಂದ ಮುಳುಗಡೆಗೊಳ್ಳುವ ಹಳ್ಳಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಈ ಬಾರಿ ಎರಡು ತಿಂಗಳ ಮಳೆಗೇ 1478 ಗ್ರಾಮಗಳು ನೆರೆಬಾಧಿತವಾಗಿದ್ದು, ಆಗಸ್ಟ್​ನಲ್ಲೂ ಇದೇ ರೀತಿ ಮಳೆ ಸುರಿದರೆ ಇನ್ನೂ ನೂರಾರು ಗ್ರಾಮಗಳು ಮುಳುಗಡೆ ಭೀತಿಗೆ ಸಿಲುಕಲಿವೆ. ಹೀಗಾಗಿ ರಾಜ್ಯ ಸರ್ಕಾರ ಪ್ರವಾಹದ ಹಾನಿ ತಡೆಯಲು ಪಂಚಾಯಿತಿವಾರು ಕ್ರಿಯಾಯೋಜನೆಯ ನವಸೂತ್ರ ರೂಪಿಸಿದೆ.

1478 ಗ್ರಾಮಗಳಲ್ಲಿ ಸಮಸ್ಯೆ: 2021ರಲ್ಲಿ ರಾಜ್ಯಾದ್ಯಂತ 1710 ಗ್ರಾಮಗಳು ನೆರೆಸುಳಿಗೆ ಸಿಲುಕಿದ್ದವು. 2022ರಲ್ಲಿ ಈ ಸಂಖ್ಯೆ 1728ಕ್ಕೆ ಏರಿಕೆ ಆಗಿತ್ತು. 2023ರಲ್ಲಿ 1763 ಗ್ರಾಮಗಳಲ್ಲಿ ಪ್ರವಾಹಸಾಧ್ಯತೆ ಅಂದಾಜಿಸಲಾಗಿತ್ತು. ಆದರೆ, ಮಳೆ ಬರಲಿಲ್ಲ. ಈ ವರ್ಷ ಮಳೆಗಾಲ ಆರಂಭವಾಗಿ ಎರಡು ತಿಂಗಳಲ್ಲೇ 1478 ಗ್ರಾಮಗಳಲ್ಲಿ ಸಮಸ್ಯೆ ಉಲ್ಬಣಿಸಿದೆ.

 ಪ್ರವಾಹಕ್ಕೇನು ಕಾರಣ: ನೆರೆ ಅವಾಂತರಕ್ಕೆ 2 ರೀತಿಯ ಕಾರಣಗಳಿವೆ. ಮಳೆ ಮೊದಲನೆಯದಾದರೆ, ಡ್ಯಾಂ ನಿಂದ ಹೊರಬಿಡುವ ನೀರು 2ನೇ ಸವಾಲು. ಕೃಷ್ಣಾ ಮೇಲ್ಕಣಿವೆ ಹಾಗೂ ಮಹಾರಾಷ್ಟ್ರದ ಕೊಯ್ನಾ ಜಲಾಶಯದ ಹೆಚ್ಚುವರಿ ನೀರಿನಿಂದ ಉತ್ತರ ಕರ್ನಾಟದಕ ಸಾವಿರಾರು ಗ್ರಾಮಗಳು ಜಲಾವೃತವಾಗುತ್ತಿವೆ. ಅದೇ ರೀತಿ ಪಶ್ಚಿಮಾಭಿಮುಖವಾಗಿ ಹರಿವ ನದಿಗಳಿಂದ ಕರಾವಳಿ, ಮಲೆನಾಡು ಭಾಗದ ಹಳ್ಳಿಗಳನ್ನು ನೆರೆ ಬಾಧಿಸುತ್ತಿದೆ. ನೀರಿನಿಂದ ಜನರಿಗೆ ತೊಂದರೆಯಾಗದಂತೆ ಕಂದಾಯ, ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲ ಹೀಗೆ 23 ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ. ಮಹಾರಾಷ್ಟ್ರದ ಕೊಯ್ನಾದಿಂದ ಹಿಂದೆಲ್ಲ ಏಕಾಏಕಿ ನೀರು ಬಿಡಲಾಗುತ್ತಿತ್ತು. ಇದೀಗ ಮಾತುಕತೆ ನಡೆಸಿ ಹಂತಹಂತವಾಗಿ ನೀರು ಬಿಡುಗಡೆ ಮಾಡುವಂತೆ ಮಾಡಲಾಗಿದೆ.

ಶಾಶ್ವತ ಸ್ಥಳಾಂತರ ಕಷ್ಟ: 2009ರಿಂದಲೇ ಪ್ರವಾಹ ಪೀಡಿತ ಗ್ರಾಮಗಳ ಶಾಶ್ವತ ಸ್ಥಳಾಂತರ ರಾಜ್ಯಕ್ಕೆ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಅನೇಕ ಗ್ರಾಮಗಳಿಗೆ ಪರ್ಯಾಯ ಜಮೀನು ಗುರುತಿಸಲಾಗಿದ್ದರೂ ಸಂತ್ರಸ್ತರು ಭಾವನಾತ್ಮಕ ಕಾರಣದಿಂದಾಗಿ ಹಳ್ಳಿ ತೊರೆಯಲು ಒಪು್ಪತ್ತಿಲ್ಲ. ಕೆಲವು ಕಡೆ ಪರ್ಯಾಯ ಜಾಗದ ಸಮಸ್ಯೆ ಇದ್ದರೆ ಇನ್ನೂ ಹಲವೆಡೆ ಜಮೀನು ದೂರವೆಂಬ ಕಾರಣಕ್ಕೆ ಜನರೇ ತಿರಸ್ಕರಿಸಿರುವ ಉದಾಹರಣೆ ಇದೆ. ಇದು ನೆರೆ ಸಮಸ್ಯೆಗೆ ಮೂಲ ಕಾರಣವಾಗಿದೆ. ಇದೇ ಕಾರಣಕ್ಕೆ ಸರ್ಕಾರ ಕ್ರಿಯಾ ಯೋಜನೆಗೆ ಕೈಹಾಕಿದೆ. ಹವಾಮಾನ ಇಲಾಖೆ ವರದಿ ಆಧರಿಸಿ ಜಿಲ್ಲಾಡಳಿತಗಳು ಮೊದಲೇ ಸಜ್ಜಾಗುವುದು, ಡ್ಯಾಂಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಜಾರಿ ಮಾಡುವುದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆ ರಚಿಸುವಂತಹ ನವಸೂತ್ರವನ್ನು ರೂಪಿಸಿದೆ.

ಕಾರ್ಯಪಡೆ ಸಿದ್ಧ: ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಪತ್ತು ಸಮಿತಿ ರಚನೆಯಾ ಗಿವೆ. ಡಿಸಿಗಳ ಪಿಡಿ ಖಾತೆಯಲ್ಲಿ 620 ಕೋಟಿ ರೂ. ಇದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಪಡೆ ರಚಿಸಲು ಸೂಚಿಸಲಾಗಿದೆ. ಆ ಕಾರ್ಯಪಡೆಗಳಿಗೆ ಪಿಡಿ ಖಾತೆಯಿಂದ ಅಗತ್ಯ ಹಣ ಬಿಡುಗಡೆ ಮಾಡಲು ತಿಳಿಸಲಾಗಿದೆ.

ಶಾಶ್ವತ ಸ್ಥಳಾಂತರ ಕಷ್ಟ: 2009ರಿಂದಲೇ ಪ್ರವಾಹ ಪೀಡಿತ ಗ್ರಾಮಗಳ ಶಾಶ್ವತ ಸ್ಥಳಾಂತರ ರಾಜ್ಯಕ್ಕೆ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಅನೇಕ ಗ್ರಾಮಗಳಿಗೆ ಪರ್ಯಾಯ ಜಮೀನು ಗುರುತಿಸಲಾಗಿದ್ದರೂ ಸಂತ್ರಸ್ತರು ಭಾವನಾತ್ಮಕ ಕಾರಣದಿಂದಾಗಿ ಹಳ್ಳಿ ತೊರೆಯಲು ಒಪು್ಪತ್ತಿಲ್ಲ. ಕೆಲವು ಕಡೆ ಪರ್ಯಾಯ ಜಾಗದ ಸಮಸ್ಯೆ ಇದ್ದರೆ ಇನ್ನೂ ಹಲವೆಡೆ ಜಮೀನು ದೂರವೆಂಬ ಕಾರಣಕ್ಕೆ ಜನರೇ ತಿರಸ್ಕರಿಸಿರುವ ಉದಾಹರಣೆ ಇದೆ. ಇದು ನೆರೆ ಸಮಸ್ಯೆಗೆ ಮೂಲ ಕಾರಣವಾಗಿದೆ. ಇದೇ ಕಾರಣಕ್ಕೆ ಸರ್ಕಾರ ಕ್ರಿಯಾ ಯೋಜನೆಗೆ ಕೈಹಾಕಿದೆ. ಹವಾಮಾನ ಇಲಾಖೆ ವರದಿ ಆಧರಿಸಿ ಜಿಲ್ಲಾಡಳಿತಗಳು ಮೊದಲೇ ಸಜ್ಜಾಗುವುದು, ಡ್ಯಾಂಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಜಾರಿ ಮಾಡುವುದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆ ರಚಿಸುವಂತಹ ನವಸೂತ್ರವನ್ನು ರೂಪಿಸಿದೆ.

ನೆರೆ ನಿಯಂತ್ರಣಕ್ಕೆ ಸಿದ್ಧತೆ: ಹವಾಮಾನ ಇಲಾಖೆ ಆಗಸ್ಟ್​ನಲ್ಲೂ ಉತ್ತಮ ಮಳೆಯ ಮುನ್ಸೂಚನೆ ನೀಡಿದೆ. ಹೀಗಾಗಿ ಹವಾಮಾನ ಇಲಾಖೆ ವರದಿಯನ್ನೇ ಪರಿಗಣಿಸಿ ಹೆಚ್ಚಿನ ಪ್ರವಾಹ ಆಗದಂತೆ ನೋಡಿಕೊಳ್ಳಲು ಡಿಸಿಗಳಿಗೆ ಸೂಚನೆ ನೀಡಲಾಗಿದೆ. ತಕ್ಷಣವೇ ಪರಿಹಾರ: ಮನೆ ಹಾನಿಗೆ 48 ಗಂಟೆಗಳಲ್ಲಿ ಪರಿಹಾರ ನೀಡಬೇಕೆಂದು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಳೆ ಹಾನಿಗೂ ಶೀಘ್ರದಲ್ಲಿ ಪರಿಹಾರ ನೀಡುವಂತಹ ಕ್ರಮ ಕೈಗೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ವಾರು ಕ್ರಿಯಾ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅಣೆಕಟ್ಟೆಗಳಿಂದ ಹೊರ ಬಿಡುವ ನೀರು ನಿರ್ವಹಣೆ ಈಗ ನಮ್ಮ ಮುಂದಿರುವ ದೊಡ್ಡ ಸವಾಲು. | ರಶ್ಮಿ ಮಹೇಶ್ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ 2009ರಿಂದ ವಿವಿಧ ಕಾರಣಗಳಿಂದಾಗಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಶಾಶ್ವತ ಪರಿಹಾರದ ಸಮಸ್ಯೆ ಇದೆ. ಆದ್ದರಿಂದ ಈ ವರ್ಷ ಎಲ್ಲಿಯೂ ಹೆಚ್ಚಿನ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದೆವು. ಸಿಬ್ಬಂದಿ, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿದ್ದೇವೆ. ಹಾನಿಯ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದೇವೆ. | ಕೃಷ್ಣ ಬೈರೇಗೌಡ ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net