ಸಿಬಿಐ ನೂತನ ಮುಖ್ಯಸ್ಥರಾಗಿ ಸುಬೋಧ ಕುಮಾರ್ ಜೈಸ್ವಾಲ್ ಅಧಿಕಾರ ಸ್ವೀಕಾರ

capture-1621962811
Published on

ನವದೆಹಲಿ; ದೇಶದ ಹಿರಿಯ ಪೊಲೀಸ್ ಅಧಿಕಾರಿ ಸುಬೋಧ ಕುಮಾರ್  ಜೈಸ್ವಾಲ್ ಅವರು ಬುಧವಾರ ಕೇಂದ್ರೀಯ ತನಿಖಾ ದಳದ (ಸಿಬಿಐ)  ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. ಅವರು ಮುಂದಿನ ಎರಡು ವರ್ಷಗಳವರೆಗೆ ಸಿಬಿಐ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಸ್ತುತ ಅವರು ಸಿಐಎಸ್ಎಫ್ ನ ಮುಖ್ಯಸ್ಥರಾಗಿದ್ದಾರೆ.

1985 ರ ಬ್ಯಾಚ್ ನ ಐಪಿಎಸ್ (ಮಹಾರಾಷ್ಟ್ರ ಕೇಡರ್) ಅಧಿಕಾರಿಯಾಗಿರುವ ಜೈಸ್ವಾಲ್  ಅವರು ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿದ್ದಾರೆ.

ಜೈಸ್ವಾಲ್  ಅವರು ಇದಕ್ಕೂ ಮುನ್ನ ಮುಂಬೈ ಪೊಲೀಸ್ ಕಮೀಷನರ್ ಆಗಿ, ಮಹಾರಾಷ್ಟ್ರ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ‘ರಾ’ ದಲ್ಲೂ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸುಮಾರು 25 ವರ್ಷ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net